alex Certify
ಕನ್ನಡ ದುನಿಯಾ       Mobile App
       

Kannada Duniya

ಕೇರಳ ಪ್ರವಾಹ ಸಂತ್ರಸ್ತರ ನೆರವಿಗೆ ಹರಿದು ಬಂದ ದೇಣಿಗೆ ಎಷ್ಟು ಗೊತ್ತಾ…?

ಶತಮಾನದಲ್ಲಿಯೇ ಕಂಡರಿಯದ ಭೀಕರ ಮಳೆ ಹಾಗೂ ಜಲ ಪ್ರಳಯಕ್ಕೀಡಾಗಿ ನಲುಗಿ ಹೋಗಿರುವ ದೇವರನಾಡು ಕೇರಳ ರಾಜ್ಯಕ್ಕೆ ನೆರವಿನ ಮಹಾಪೂರವೇ ಹರಿದು ಬಂದಿದೆ. ಮುಖ್ಯಮಂತ್ರಿ ವಿಪತ್ತು ಪರಿಹಾರ ನಿಧಿಗೆ 1,027 ಕೋಟಿ ದೇಣಿಗೆ ಸಂಗ್ರಹವಾಗಿದೆ.

ಪ್ರವಾಹದಿಂದ ಸಂತ್ರಸ್ತರಾದ ಕೇರಳದ ಜನತೆಯ ಸಂಕಷ್ಟಕ್ಕೆ ಸಹಾಯ ಮಾಡುವ ನಿಟ್ಟಿನಲ್ಲಿ ದೇಶ-ವಿದೇಶಗಳಿಂದ ನೆರವಿನ ಹಸ್ತ ನೀದಲಾಗಿದ್ದು, ಅಗತ್ಯ ವಸ್ತುಗಳ ಜತೆಗೆ ಅಪಾರ ಪ್ರಮಾಣದ ದೇಣಿಗೆಯನ್ನು ನೀಡಲಾಗಿದೆ. ಈವರೆಗೆ ಮುಖ್ಯಮಂತ್ರಿ ವಿಪತ್ತು ಪರಿಹಾರ ನಿಧಿಗೆ ಬರೋಬ್ಬರಿ 1,027 ಕೋಟಿ ರೂ. ಸಂಗ್ರಹವಾಗಿದೆ ಎಂದು ತಿಳಿದುಬಂದಿದ್ದು, ಇದನ್ನು ಕಾನೂನು ರೀತಿಯಲ್ಲಿ ಹೇಗೆ ಪಡೆದುಕೊಳ್ಳಬೇಕೆಂಬ ಬಗ್ಗೆ ಪರಿಶೀಲನೆ ನಡೆದಿದೆ.

ಇನ್ನು ರಾಜ್ಯದ ಪ್ರವಾಹ ಪರಿಸ್ಥಿತಿಗೆ 483 ಜನ ಸಾವನ್ನಪ್ಪಿದ್ದು, 15 ಜನರ ಬಗ್ಗೆ ಇನ್ನೂ ಸುಳಿವು ಕೂಡ ಸಿಕ್ಕಿಲ್ಲ. ಮಳೆ ಹಾಗೂ ಪ್ರವಾಹದಿಂದ ರಾಜ್ಯದಲ್ಲಾಗಿರುವ ನಷ್ಟ, ರಾಜ್ಯದ ಯೋಜನಾ ವೆಚ್ಚವಾದ 37,247 ಕೋಟಿಗಿಂತಲೂ ಹೆಚ್ಚಾಗಿದೆ. 305 ಪರಿಹಾರ ಶಿಬಿರಗಳಲ್ಲಿ ಇನ್ನೂ 59,296 ಜನ ಆಶ್ರಯ ಪಡೆದಿದ್ದಾರೆ. ಒಟ್ಟು 57 ಸಾವಿರ ಹೆಕ್ಟೇರ್ ಕೃಷಿ ಭೂಮಿ ನಾಶವಾಗಿದೆ ಎಂದು ಸಿಎಂ ಪಿಣರಾಯ್ ವಿಜಯನ್ ಮಾಹಿತಿ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...