alex Certify
ಕನ್ನಡ ದುನಿಯಾ       Mobile App
       

Kannada Duniya

ನೋವಿನ ನಡುವೆಯೂ ಕೇರಳಕ್ಕಾಗಿ ಪ್ರಾರ್ಥಿಸಿದ ಸೋನಾಲಿ

ಕೇರಳದಲ್ಲಿ ವರುಣನ ಮುನಿಸಿಗೆ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ದಿನೇ ದಿನೇ ಸಾವಿನ ಸಂಖ್ಯೆಯಲ್ಲಿ ಏರಿಕೆ ಆಗ್ತಾ ಇದೆ. ಕಣ್ಮರೆಯಾದವರ ಸಂಖ್ಯೆ ದ್ವಿಗುಣವಾಗುತ್ತಿದೆ. ನಿರಾಶ್ರಿತರಿಗೆ ಬೇಕಾದ ಸೌಲಭ್ಯಗಳನ್ನು ನೀಡಲು ಸ್ಥಳೀಯ ಸರ್ಕಾರ ಶ್ರಮಿಸುತ್ತಿದೆ.

ಈ ಬೆನ್ನೆಲ್ಲೆ ಬಾಲಿವುಟ್ ನಟ ಅಮಿತಾಬ್ ಬಚ್ಚನ್, ವಿದ್ಯಾ ಬಾಲನ್, ಶ್ರದ್ಧಾ ಕಪೂರ್ ಹಾಗೂ ಸಿದ್ದಾರ್ಥ್ ಮಲೋತ್ರಾ ಸೇರಿದಂತೆ ಹಲವು ಸ್ಟಾರ್ ಗಳು ಕೇರಳ ಜನತೆಗೆ ಸಹಾಯ ಮಾಡುವಂತೆ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ಅಲ್ಲದೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೈ ಜೋಡಿಸಿದ್ದಾರೆ.

ನ್ಯೂಯಾರ್ಕ್ ನಲ್ಲಿ ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆ ಪಡೆಯುತ್ತಿರುವ ಸೋನಾಲಿ ಬೇಂದ್ರೆ ಸಹ, ಟ್ವಿಟರ್ ನಲ್ಲಿ ಕೇರಳಕ್ಕೆ ನೆರವು ನೀಡುವಂತೆ ಕೇಳಿಕೊಂಡಿದ್ದಾರೆ. ಕೇರಳದ ಜನರ ಸುರಕ್ಷತೆಗಾಗಿ ಪ್ರಾರ್ಥಿಸಿದ್ದಾರೆ. ಅಲ್ಲದೆ ದೇವರ ನಾಡಿನ ಜನರಿಗೆ ಸಹಾಯ ಮಾಡಲು ಇದು ಒಳ್ಳೆಯ ಅವಕಾಶ, ನೊಂದವರ ನೋವಿಗೆ ಸ್ಪಂದಿಸಿ ಎಂದು ಕೇಳಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...