alex Certify
ಕನ್ನಡ ದುನಿಯಾ       Mobile App
       

Kannada Duniya

ಮಳೆಯಿಂದ ಕೇರಳಕ್ಕೆ ಆದ ಹಾನಿ ಎಷ್ಟು ಗೊತ್ತಾ…?

ಪ್ರವಾಹ ಪೀಡಿತ ಕೇರಳ ಪರಿಸ್ಥಿತಿಗೆ ದೇಶವಾಸಿಗಳ ಮನ ಕರಗಿದೆ. ದೇಶವಾಸಿಗಳು ಕೇರಳಕ್ಕೆ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. ನಿರಾಶ್ರಿತರ ನೆರವಿಗೆ ಭಾರತವಾಸಿಗಳು ಧಾವಿಸಿದ್ದಾರೆ. ಸಾರ್ವಜನಿಕರು ಮುಖ್ಯಮಂತ್ರಿ ಪರಿಹಾರ ನಿಧಿಗೆ ಹಣ ಸಂದಾಯ ಮಾಡಿದ್ರೆ, ಹಲವರು ಕೇರಳ ಜನರಿಗೆ ಆಹಾರ, ಬಟ್ಟೆ ನೀಡಿದ್ದಾರೆ.

ಕೇರಳದಲ್ಲಿ ಸುರಿದ ಭಾರೀ ಮಳೆಗೆ 370 ಜನ ಸಾವನ್ನಪ್ಪಿದ್ದಾರೆ. 7,24,649 ನಿರಾಶ್ರಿತರು, 5,645 ಗಂಜಿ ಕೇಂದ್ರಗಳತ್ತ ಮುಖ ಮಾಡಿದ್ದಾರೆ. ಸೇನೆ ಹಾಗೂ ರಕ್ಷಣೆಗೆ ಕೈ ಜೋಡಿಸಿದ ಸಂಘ-ಸಂಸ್ಥೆಗಳಿಂದ ಸುಮಾರು 38 ಸಾವಿರ ಜನರನ್ನು ರಕ್ಷಿಸಲಾಗಿದೆ.

ರಕ್ಷಣೆಗಾಗಿ 67 ಹೆಲಿಕಾಪ್ಟರ್, 24 ಪ್ಲೇನ್, 548 ಬೋಟ್ ಬಳಸಲಾಗಿದೆ. ಭಾರತೀಯ ಸೇನೆಯ ಸೈನಿಕರು, ನೇವಿ ಹಾಗೂ ಏರ್ ಫೋರ್ಸ್, ಎನ್.ಡಿ.ಆರ್.ಎಫ್ ಹಾಗೂ ಎಸ್.ಡಿ.ಆರ್.ಎಫ್ ಸಿಬ್ಬಂದಿಗಳು ಸಂತ್ರಸ್ಥರ ರಕ್ಷಣೆಗೆ ಹಗಲಿರುಳು ಶ್ರಮಿಸಿದ್ದಾರೆ. ಮಳೆಯಿಂದಾಗಿ ಕೇರಳ ರಾಜ್ಯದ 16,000 ಕಿಲೊ ಮೀಟರ್ ರಸ್ತೆಗೆ
ಹಾನಿಯಾಗಿದ್ದು, 134 ಸೇತುವೆಗಳು ಹಾನಿಗೊಳಗಾಗಿವೆ. ಸಾವಿರಾರು ಮನೆಗಳು ನಾಶವಾಗಿದ್ದು, 40 ಸಾವಿರ ಹೆಕ್ಟರ್ ಗದ್ದೆ ಸರ್ವನಾಶವಾಗಿದೆ.

ಕೇರಳದಲ್ಲಿ ಬಿದ್ದ ಮಳೆಗೆ ಹಲವು ಜಿಲ್ಲೆಗಳು ನಲುಗಿವೆ. ಮುಂದಿನ ದಿನಗಳಲ್ಲೂ ಭಾರೀ ಮಳೆಯ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಗಂಜಿ ಕೇಂದ್ರ ಹಾಗೂ ನಿರಾಶ್ರಿತ ಕೇಂದ್ರಗಳ ಸುತ್ತ ನೀರು ಶೇಖರಣೆ ಆಗಿದ್ದು, ಪರಿಹಾರ ಕಾರ್ಯಕ್ಕೆ ತೊಂದರೆಯಾಗುತ್ತಿದೆ. ಮಳೆ ನಿಂತ ಮೇಲೆ ಹರಡಬಹುದಾದ ಮಹಾಮಾರಿ ಕಾಯಿಲೆಗಳು ಮತ್ತಷ್ಟು ಭೀತಿಗೊಳ್ಳುವಂತೆ ಮಾಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...