alex Certify
ಕನ್ನಡ ದುನಿಯಾ       Mobile App
       

Kannada Duniya

ಬಹುಮಾನ ಲಭಿಸಿದ್ದ ಲಾಟರಿ ಟಿಕೇಟನ್ನೇ ನೆರೆ ಸಂತ್ರಸ್ಥರ ಪರಿಹಾರ ನಿಧಿಗೆ ಅರ್ಪಿಸಿದ ವಿಜೇತ

ತಿರುವನಂತಪುರಂ: ಕೇರಳ ರಾಜ್ಯ ಸರಕಾರದ ನಿರ್ಮಲ್‌ ಲಾಟರಿಯಲ್ಲಿ 1 ಲಕ್ಷ ರೂ. ನಗದು ಬಹುಮಾನ ಗೆದ್ದ ವ್ಯಕ್ತಿಯೊಬ್ಬರು ಇದನ್ನು ಪ್ರವಾಹ ಸಂತ್ರಸ್ತರಿಗಾಗಿ ನೀಡಿದ್ದಾರೆ.

ಶತಮಾನ ಕಂಡ ಭೀಕರ ಪ್ರವಾಹದಲ್ಲಿ ಲಕ್ಷಕ್ಕೂ ಅಧಿಕ ಮಂದಿ ಮನೆ ಕಳೆದುಕೊಂಡಿದ್ದು, ಪರಿಹಾರ ಕೇಂದ್ರಗಳಲ್ಲಿರುವ ಸಂತ್ರಸ್ತರಿಗೆ ಸಹಾಯ ಮಾಡಲು ದೇಶಾದ್ಯಂತ ಸಾರ್ವಜನಿಕರು ಮುಂದೆ ಬರುತ್ತಿದ್ದಾರೆ.

ಕೇರಳದ ಕೊಲ್ಲಂನ ಅಂಚಲ್‌ನಲ್ಲಿ ವ್ಯಾಪಾರಿ ಹಾಗೂ ಲಾಟರಿ ಏಜೆಂಟ್‌ ಹಂಸ ಎಂಬಾತ, ಆ.10 ರಂದು ತಾನು ಗೆದ್ದ 1 ಲಕ್ಷ ರೂ. ಬಹುಮಾನದ ಲಾಟರಿ ಟಿಕೇಟನ್ನೇ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ದಾರೆ.

ಹಂಸ, ಪತ್ನಿ ಸೋನಿಯಾ, ಮಕ್ಕಳಾದ ಹನ ಫಾತಿಮಾ ಹಾಗೂ ಹದಿಯಾ ಕೇರಳ ಸಿಎಂ ಪಿನರಾಯ್‌ ವಿಜಯನ್‌ ಅವರನ್ನು ಭೇಟಿ ಮಾಡಿ, ಇದನ್ನು ನೀಡಿದ್ದಾರೆ.

ಪ್ರವಾಹದಲ್ಲಿ 300ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, ಲಕ್ಷಕ್ಕೂ ಹೆಚ್ಚು ಜನರು ಮನೆ ಕಳೆದುಕೊಂಡಿದ್ದಾರೆ. ಭಾರತೀಯ ಸೇನಾ ಪಡೆ ಪ್ರವಾಹದಲ್ಲಿ ಸಿಲುಕಿದ್ದ ಅನೇಕರನ್ನು ರಕ್ಷಿಸಿತ್ತು. ದೇಶದ ಅನೇಕ ಸಂಘಟನೆಗಳು, ಸಂಸ್ಥೆಗಳು ಕೇರಳಕ್ಕೆ ಪರಿಹಾರ ಸಾಮಾಗ್ರಿಗಳನ್ನು ಕಳಿಸಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...