alex Certify
ಕನ್ನಡ ದುನಿಯಾ       Mobile App
       

Kannada Duniya

ಸುಳ್ಳು ಸುದ್ದಿ ತಡೆಗೆ ಕೇರಳ ಸರ್ಕಾರದಿಂದ ಹೊಸ ಪ್ಲಾನ್

ದೇವರ ನಾಡು ಕೇರಳ ಈಗ ಅತಿವೃಷ್ಟಿಯಿಂದಾಗಿ ದ್ವೀಪದಂತಾಗಿದೆ. ಅತಿಯಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕೇರಳದ ನದಿಗಳು ಉಕ್ಕಿ ಹರಿಯುತ್ತಿದ್ದು, ಪ್ರವಾಹದಿಂದಾಗಿ ದಿನೇ ದಿನೇ ಜನಜೀವನ ಅಸ್ಥವ್ಯಸ್ಥಗೊಳ್ಳುತ್ತಿದೆ. ಕೇರಳದ ಪ್ರವಾಹ ಪರಿಸ್ಥಿತಿಯ ಬಗ್ಗೆ ಅನೇಕ ಸುಳ್ಳು ಸುದ್ದಿಗಳು ಜನರ ಮಧ್ಯೆ ಹರಿದಾಡುತ್ತಿವೆ. ಇದಕ್ಕೆಲ್ಲಾ ಬ್ರೇಕ್ ಹಾಕೋದಕ್ಕೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಟ್ವಿಟ್ಟರ್ ಮೂಲಕ ಹೊಸ ವ್ಯವಸ್ಥೆಯನ್ನು ಜಾರಿಗೆ ತಂದಿದ್ದಾರೆ.

ಟ್ವಿಟ್ಟರ್ ನಲ್ಲಿ ಹ್ಯಾಷ್ ಟ್ಯಾಗ್ ಗಳ ಮೂಲಕ ಕೇರಳದ ಪ್ರವಾಹದ ಸಂಪೂರ್ಣ ಮತ್ತು ನಿಖರ ಮಾಹಿತಿ ದೊರೆಯಲಿದೆಯಂತೆ. ಟ್ವಿಟ್ಟರ್ ನಲ್ಲಿರುವ ಕೇರಳ ಫ್ಲಡ್ ಹ್ಯಾಷ್ ಟ್ಯಾಗ್ ಅಥವಾ ಕೇರಳ ಫ್ಲಡ್ 2018 ಹ್ಯಾಷ್ ಟ್ಯಾಗ್ ಕ್ಲಿಕ್ ಮಾಡಿದ್ರೆ ಸಾಕು ಕೇರಳ ಸರ್ಕಾರ ಪ್ರವಾಹ ಪರಿಹಾರ ಕಾರ್ಯಗಳು, ವಸತಿ ಸೌಲಭ್ಯ ಒದಗಿಸಿರುವ, ಪ್ರವಾಸ ಪೀಡಿತರ ಕ್ಯಾಂಪ್ ಸೇರಿದಂತೆ ಪ್ರವಾಹಕ್ಕೆ ಸಂಬಂಧಿಸಿದ ಸಮಗ್ರ ಮತ್ತು ಖಚಿತ ಮಾಹಿತಿ ದೊರೆಯಲಿದೆಯಂತೆ.

ಕೇರಳ ಪ್ರವಾಹದ ಬಗ್ಗೆ ಸುಳ್ಳು ಸುದ್ದಿ ಹರಡದಂತೆ ಮುಖ್ಯಮಂತ್ರಿಗಳು ಜನರಲ್ಲಿ ಮನವಿ ಮಾಡಿದ್ದಾರೆ. ಹಲವು ಭಾಷೆಗಳಲ್ಲಿ ಕೇರಳ ಸರ್ಕಾರ ಪ್ರವಾಹದ ಬಗ್ಗೆ ಮಾಹಿತಿಯನ್ನು ನೀಡುತ್ತಿದೆ. ಒಂದು ವೇಳೆ ಪ್ರವಾಹ ಪರಿಹಾರ ನಿಧಿಗೆ ಧನ ಸಹಾಯ ಮಾಡಬೇಕು ಎಂದು ಬಯಸಿದಲ್ಲಿ ಹ್ಯಾಷ್ ಟ್ಯಾಗ್ ಗಳ ಮೂಲಕ ಸರ್ಕಾರದ ನಾನಾ ಇಲಾಖೆಗಳನ್ನ ಸಂಪರ್ಕಿಸಬಹುದಾಗಿದೆಯಂತೆ. ಕೇರಳದ ಇತಿಹಾಸದಲ್ಲೇ ಇದು ಕರಾಳ ಪ್ರವಾಹವಾಗಿದ್ದು, 37 ಮಂದಿ ಸಾವಿಗೀಡಾಗಿದ್ದು 54,000 ಮಂದಿ ನಿರಾಶ್ರಿತರಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...