alex Certify
ಕನ್ನಡ ದುನಿಯಾ       Mobile App
       

Kannada Duniya

ಕೇರಳ ನಿರಾಶ್ರಿತರ ಸಹಾಯಕ್ಕೆ ಬಂದ ಬಾಹುಬಲಿ

ಕೇರಳ ಶತಮಾನದ ಕೆಟ್ಟ ಪ್ರವಾಹಕ್ಕೆ ತತ್ತರಿಸಿ ಹೋಗಿದೆ. ಕೇರಳದಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಸಾವಿನ ಸಂಖ್ಯೆ ದಿನ ದಿನಕ್ಕೂ ಹೆಚ್ಚಾಗ್ತಾಯಿದ್ದು, ಮೂಲೆ ಮೂಲೆಯಲ್ಲಿ ಸಿಕ್ಕಿಬಿದ್ದಿರುವ ಜನರ ರಕ್ಷಣೆಗೆ ರಕ್ಷಣಾ ಪಡೆ ಹರಸಾಹಸಪಡ್ತಿದೆ. ಈ ಮಧ್ಯೆ ದೇಶ-ವಿದೇಶಗಳ ಜನರು ನಿರಾಶ್ರಿತರ ನೆರವಿಗೆ ಮುಂದೆ ಬರ್ತಿದ್ದಾರೆ. ಆಹಾರ, ಬಟ್ಟೆ, ನೀರು ಸೇರಿದಂತೆ ಅಗತ್ಯ ವಸ್ತುಗಳು ಕೇರಳಕ್ಕೆ ಬರ್ತಿವೆ.

ಜನಸಾಮಾನ್ಯರಿಂದ ಹಿಡಿದು ಕಲಾವಿದರವರೆಗೆ ಎಲ್ಲರೂ ಕೇರಳಿಗರಿಗೆ ನೆರವಾಗ್ತಿದ್ದಾರೆ. ಬಾಹುಬಲಿ ಸ್ಟಾರ್ ಪ್ರಭಾಸ್ ಕೂಡ ಇದ್ರಿಂದ ಹೊರತಾಗಿಲ್ಲ. ಪ್ರಭಾಸ್, ಕೇರಳ ಮುಖ್ಯಮಂತ್ರಿ ಪರಿಹಾರ ನಿಧಿಗೆ ಹಣ ನೀಡಿದ್ದಾರೆ. ಸರ್ಕಾರೇತರ ಸಂಸ್ಥೆಗೆ ಪ್ರಭಾಸ್ 25 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ. ನಟನ ಈ ಸಣ್ಣ ಪ್ರಯತ್ನ ಕೇರಳದ ಕೆಲ ಜನರಿಗೆ ಸಹಾಯವಾಗಲಿದೆ.

ಪ್ರಭಾಸ್ ಒಬ್ಬರೆ ಅಲ್ಲ ಸ್ಯಾಂಡಲ್ವುಡ್, ಬಾಲಿವುಡ್, ಕಾಲಿವುಡ್ ಸೇರಿದಂತೆ ಭಾರತ ಚಿತ್ರರಂಗದ ಅನೇಕಾನೇಕ ಕಲಾವಿದರು ನೆರವಿಗೆ ಧಾವಿಸಿದ್ದಾರೆ. ಮುಖ್ಯಮಂತ್ರಿ ಪರಿಹಾರ ನಿಧಿಗೆ ಕೆಲವರು ಹಣ ನೀಡಿದ್ರೆ ಮತ್ತೆ ಕೆಲವರು ವಸ್ತುಗಳನ್ನು ನೀಡಿದ್ದಾರೆ. ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ನೆರವು ನೀಡುವಂತೆ ಜನರಲ್ಲಿ ಮನವಿ ಮಾಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...