alex Certify
ಕನ್ನಡ ದುನಿಯಾ       Mobile App
       

Kannada Duniya

ಟೀ ಸ್ಟಾಲ್ ಹಾಕಿ ಕೇರಳ ಜನರಿಗೆ 51 ಸಾವಿರ ಹಣ ನೀಡಿದ್ರು ಮುಂಬೈ ಮಕ್ಕಳು

ಶತಮಾನದ ಅತಿದೊಡ್ಡ ಪ್ರವಾಹ ಕೇರಳದ ಚಿತ್ರಣವನ್ನೇ ಬದಲಿಸಿದೆ. ಸವಾಲಿನ ಬದುಕಿನೊಂದಿಗೆ ಜನರು ತಮ್ಮ ಮನೆಗಳಿಗೆ ತೆರಳುತ್ತಿದ್ದಾರೆ. ನಿಧಾನವಾಗಿ ಕೇರಳದ ಪರಿಸ್ಥಿತಿ ಬದಲಾಗ್ತಿದೆ. ಶಾಲೆಗಳು ಪುನರಾರಂಭಗೊಂಡಿವೆ.

ಇಡೀ ದೇಶದ ಜನರೇ ಕೇರಳಿಗರ ನೆರವಿಗೆ ಮುಂದಾಗಿದ್ದಾರೆ. ಮುಖ್ಯಮಂತ್ರಿ ಪರಿಹಾರ ನಿಧಿಗೆ ಹಣ ಸಹಾಯ ಮಾಡ್ತಿದ್ದಾರೆ. ಆಹಾರ, ಬಟ್ಟೆ, ಔಷಧಿ ಸೇರಿದಂತೆ ಅಗತ್ಯ ವಸ್ತುಗಳನ್ನು ನೆರೆ ಸಂತ್ರಸ್ತರಿಗೆ ನೀಡ್ತಿದ್ದಾರೆ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಕೇರಳ ಜನರಿಗೆ ಕೈಲಾದ ಸಹಾಯ ಮಾಡ್ತಿದ್ದಾರೆ.

ಕೇರಳಿಗರಿಗೆ ನೆರವಾದವರಲ್ಲಿ  ಮುಂಬೈ ಶಾಲೆ ಮಕ್ಕಳು ಹೊರತಾಗಿಲ್ಲ. ಲಾತೂರ್ ಜಿಲ್ಲೆಯ ಅಹಮದ್ಪುರದ ಶಾಲೆಯೊಂದರ ಮಕ್ಕಳು ಕೇರಳ ಜನರಿಗೆ 51 ಸಾವಿರ ರೂಪಾಯಿ ದಾನ ಮಾಡಿದ್ದಾರೆ. ಮಕ್ಕಳು ಟೀ ಸ್ಟಾಲ್ ಇಟ್ಟು ಇಷ್ಟೊಂದು ಹಣ ಸಂಗ್ರಹ ಮಾಡಿದ್ದಾರೆ ಎನ್ನಲಾಗ್ತಿದೆ. ಮಕ್ಕಳು ಹಣವನ್ನು ಮಹಾರಾಷ್ಟ್ರದ ಮುಖ್ಯಮಂತ್ರಿಗಳಿಗೆ ನೀಡಿದ್ದಾರೆ. ಮಕ್ಕಳ ಸಾಧನೆಯನ್ನು ದೇವೇಂದ್ರ ಫಡ್ನವಿಸ್ ಶ್ಲಾಘಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...