alex Certify
ಕನ್ನಡ ದುನಿಯಾ       Mobile App
       

Kannada Duniya

ಮಾಲೀಕನ ಕುಟುಂಬ ರಕ್ಷಿಸ್ತು ನಿಷ್ಠಾವಂತ ನಾಯಿ

ಕೇರಳದಲ್ಲಿ ನಿಷ್ಠಾವಂತ ಹಾಗೂ ಬುದ್ದಿವಂತ ನಾಯಿಯೊಂದು ತನ್ನ ಮಾಲೀಕ ಹಾಗೂ ಆತನ ಕುಟುಂಬಸ್ಥರ ರಕ್ಷಣೆ ಮಾಡಿದೆ. ಕೇರಳದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಭಾರೀ ಮಳೆಯಾಗ್ತಿದೆ. ಧಾರಾಕಾರವಾಗಿ ಸುರಿಯುತ್ತಿರುವ ಮಳೆ ಹಾಗೂ ಭೂಕುಸಿತ 30ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿದೆ. ಈ ಕುಟುಂಬ ಕೂಡ ಯಮನ ಪಾದ ಸೇರಬೇಕಿತ್ತು. ಆದ್ರೆ ನಾಯಿಯಿಂದ ಕುಟುಂಬಸ್ಥರ ಪ್ರಾಣ ಉಳಿದಿದೆ.

ನಾಯಿ ರಾಕಿ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಬೊಗಳಲು ಶುರು ಮಾಡಿದೆಯಂತೆ. ಆತಂಕದ ಧ್ವನಿಯಲ್ಲಿ ನಾಯಿ ಬೊಗಳುತ್ತಿತ್ತಂತೆ. ಗಾಢ ನಿದ್ರೆಯಲ್ಲಿದ್ದ ಮೋಹನನ್ ಹಾಗೂ ಆತನ ಪತ್ನಿಗೆ ಎಚ್ಚರವಾಗಿದೆ. ಏನಾಯ್ತೆಂದು ನೋಡಲು ಇಬ್ಬರೂ ಹಾಸಿಗೆಯಿಂದ ಎದ್ದಿದ್ದಾರೆ.

ಹಾಸಿಗೆ ಬಿಟ್ಟ ಕೆಲವೇ ಕ್ಷಣಗಳಲ್ಲಿ ದೊಡ್ಡ ಶಬ್ದವೊಂದು ಕೇಳಿದೆಯಂತೆ. ಭಯಗೊಂಡವರು ಮನೆ ಹೊರಗೆ ಓಡಿ ಬಂದಿದ್ದಾರೆ. ನೋಡ್ತ ನೋಡ್ತಿದ್ದಂತೆ ಮನೆ ಕುಸಿದು ಬಿದ್ದಿದೆ. ನಾಯಿಯಿಂದಾಗಿ ತಮ್ಮ ಪ್ರಾಣ ಉಳಿತು ಎನ್ನುತ್ತಾರೆ ಕುಟುಂಬಸ್ಥರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...