alex Certify
ಕನ್ನಡ ದುನಿಯಾ       Mobile App
       

Kannada Duniya

ಕಣ್ಣೀರು ತರಿಸುತ್ತೆ ಕೇರಳದ ಈ ಮಹಿಳೆಯ ಕಥೆ

ಶತಮಾನದ ದೊಡ್ಡ ಪ್ರವಾಹಕ್ಕೆ ಕೇರಳ ಕೊಚ್ಚಿ ಹೋಗಿದೆ. ಕೇರಳದಲ್ಲಿ ಪ್ರವಾಹದ ಮಟ್ಟ ಕಡಿಮೆಯಾಗಿದೆ. ಆದ್ರೆ ಬದುಕು ಕಟ್ಟಿಕೊಳ್ಳುವ ಸವಾಲು ಜನರ ಮುಂದಿದೆ. ಈ ಪ್ರವಾಹ ಅನೇಕರ ಬದುಕಲ್ಲಿ ಅಳಿಸಲಾಗದ ನೋವು ನೀಡಿದೆ. ಮನಕಲಕುವ ಘಟನೆಯೊಂದನ್ನು ಶೋಶಮ್ಮ ಎಲ್ಲರ ಮುಂದಿಟ್ಟಿದ್ದಾಳೆ.

ಪ್ರವಾಹಕ್ಕೆ ಶೋಶಮ್ಮ ಹಾಗೂ ಆಕೆ ಪತಿ ಅಬ್ರಹಾಮ್ ವಾಸವಾಗಿದ್ದ ಮನೆ ಮುಳುಗಲು ಶುರುವಾಗಿತ್ತಂತೆ. ಇಬ್ಬರೂ ಒಂದನೇ ಮಹಡಿ ಮೇಲೆ ಆಶ್ರಯ ಪಡೆದಿದ್ದರಂತೆ. ಈ ಮಧ್ಯೆ ಅಕ್ಕಪಕ್ಕದವರ ಪರಿಸ್ಥಿತಿ ವಿಚಾರಿಸಲು ಅಬ್ರಹಾಮ್ ಕೆಳಗೆ ಹೋಗಿದ್ದಾರೆ. ತುಂಬಾ ಸಮಯವಾದ್ರೂ ವಾಪಸ್ ಬರದ ಕಾರಣ ಶೋಶಮ್ಮ ಹುಡುಕುತ್ತ ಹೋಗಿದ್ದಾಳೆ. ಆಗ ಸಿಕ್ಕಿದ್ದು ಪತಿಯಲ್ಲ, ಪತಿ ಶವ.

ಸಂಬಂಧಿಕರ ಸಹಾಯದಿಂದ ಪತಿ ಶವವನ್ನು ಮನೆಗೆ ತಂದ ಶೋಶಮ್ಮ, ಶವ ನೀರಿನಲ್ಲಿ ಕೊಳೆಯದಿರಲಿ ಎನ್ನುವ ಕಾರಣಕ್ಕೆ ಮೆಟ್ಟಿಲಿಗೆ ಕಟ್ಟಿದ್ದಾಳಂತೆ. ನಂತ್ರ ರಕ್ಷಣಾ ಪಡೆ ದಾರಿ ನೋಡುತ್ತ ನಿಂತಿದ್ದಳಂತೆ. ರಕ್ಷಣಾ ಪಡೆ ಅಲ್ಲಿಗೆ ಬಂದು ಶೋಶಮ್ಮನ ರಕ್ಷಣೆ ಮಾಡಿದೆ ನಿಜ. ಆದ್ರೆ ಶವದ ಸ್ಥಿತಿ ನೋಡಿ ಶೋಶಮ್ಮ ಮತ್ತಷ್ಟು ಕುಸಿದಿದ್ದಾರೆ.

ಆ್ಯಂಬುಲೆನ್ಸ್ ನಲ್ಲಿ ತಂದಿದ್ದ ಶವವನ್ನು ಮೂರು ದಿನವಾದ್ರೂ ಯಾರೂ ನೋಡಿರಲಿಲ್ಲವಂತೆ. ಅದು ಕೊಳೆತು ವಾಸನೆ ಬರ್ತಿತ್ತಂತೆ. ಮಗ ಬಂದ ಮೇಲೆ ಶೋಶಮ್ಮ ಶವವನ್ನು ಸ್ವಚ್ಛಗೊಳಿಸಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...