alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರವಾಹದಲ್ಲಿ ಸಿಲುಕಿದ್ದ ಸಂತ್ರಸ್ತರಿಗೆ ಮೆಟ್ಟಿಲಾದ ಮೀನುಗಾರನಿಗೆ ಕಾರ್ ಗಿಫ್ಟ್

ಕಳೆದ ತಿಂಗಳು ಕೇರಳದಲ್ಲಿ ಶತಮಾನದಲ್ಲೇ ಕಂಡರಿಯದಂತಹ ಭೀಕರ ಪ್ರವಾಹ ಪರಿಸ್ಥಿತಿ ಎದುರಾಗಿತ್ತು. ಇದರಿಂದ ನೂರಾರು ಮಂದಿ ಸಾವನ್ನಪ್ಪಿ, ಸಹಸ್ರಾರು ಮಂದಿ ನಿರಾಶ್ರಿತರಾಗಿದ್ದರು.

ಆ ನಂತರ ನೆರೆ ಸಂತ್ರಸ್ತರಿಗೆ ನೆರವಾಗಲು ದೇಶ-ವಿದೇಶಗಳಿಂದ ನೆರವು ಹರಿದು ಬಂದಿದ್ದರೂ, ಸಂಕಷ್ಟದ ಪರಿಸ್ಥಿತಿಯಲ್ಲಿ ಸ್ಥಳೀಯರು ನೀಡಿದ ನೆರವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಇಂತಹುದೇ ಒಂದು ಪ್ರಕರಣದಲ್ಲಿ 32 ವರ್ಷದ ಮೀನುಗಾರ ಜೈಸಾಲ್ ಎಂಬವರು ಎದೆ ಮಟ್ಟದ ನೀರು ನಿಂತಿದ್ದ ಪ್ರದೇಶದಲ್ಲಿ ಮಹಿಳೆಯರು ದೋಣಿ ಏರುವ ಸಲುವಾಗಿ ಮೆಟ್ಟಿಲಾಗಿ ನಿಂತಿದ್ದರು.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತಲ್ಲದೆ ಜೈಸಾಲ್ ಅವರ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು. ಇದನ್ನು ಗುರುತಿಸಿದ ಕೋಜಿಕೋಡ್ ನ ಮಹೀಂದ್ರಾ ಕಂಪನಿಯ ವಾಹನ ಮಾರಾಟಗಾರರು ಜೈಸಾಲ್ ಅವರಿಗೆ ಹೊಚ್ಚ ಹೊಸ ಕಾರನ್ನು ಗಿಫ್ಟ್ ಆಗಿ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...