alex Certify
ಕನ್ನಡ ದುನಿಯಾ       Mobile App
       

Kannada Duniya

ಬೀದಿ ನಾಯಿಗೆ ಬೆದರಿ ಓಡಿದ ಯುವತಿ ಬಾವಿಯಲ್ಲಿ ಬಿದ್ದು ಸಾವು

girl

ಕೇರಳದ ಎರುಮಪೆಟ್ಟಿ ಬಳಿಯ ಕಂಡಂಗೋಡುವಿನಲ್ಲಿ ಬೀದಿ ನಾಯಿಗಳು ಅಟ್ಟಿಸಿಕೊಂಡು ಬಂದಿದ್ರಿಂದ ಬೆದರಿ ಓಡಿದ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಬಾವಿಯಲ್ಲಿ ಬಿದ್ದು ಮೃತಪಟ್ಟಿದ್ದಾಳೆ. ಹರಿದಾಸನ್ ಎಂಬುವವರ ಪುತ್ರಿ ಗ್ರೀಷ್ಮಾ ಮೃತ ದುರ್ದೈವಿ. ಗುರುವಾಯೂರಿನ ಆರ್ಯಭಟ ಕಾಲೇಜಿನಲ್ಲಿ ಓದುತ್ತಿದ್ದ ಗ್ರೀಷ್ಮಾ ಮನೆಗೆ ವಾಪಸ್ಸಾಗುತ್ತಿದ್ಲು.

ಈ ವೇಳೆ ರಕ್ಕಸ ಬೀದಿನಾಯಿಗಳ ಹಿಂಡು ಅವಳನ್ನು ಅಟ್ಟಿಸಿಕೊಂಡು ಬಂದಿದೆ. ಹೆದರಿ ಅಳುತ್ತ ಓಡಿ ಬಂದ ಗ್ರೀಷ್ಮಾ ಆಕಸ್ಮಿಕವಾಗಿ ಬಾವಿಗೆ ಬಿದ್ದಿದ್ದಾಳೆ. ಕೂಡಲೇ ಸ್ಥಳೀಯರು ಬಾವಿಗೆ ಜಿಗಿದರಾದ್ರೂ ಗ್ರೀಷ್ಮಾಳನ್ನು ಬದುಕಿಸಲು ಸಾಧ್ಯವಾಗಲಿಲ್ಲ.

ಬಳಿಕ ಪೊಲೀಸರು ಸ್ಥಳಕ್ಕಾಗಮಿಸಿ ಮೃತದೇಹವನ್ನು ಬಾವಿಯಿಂದ ಹೊರಕ್ಕೆ ತೆಗೆದಿದ್ದಾರೆ. ಅಡಿಕೆ ತೋಟದ ಬಳಿ ಈ ದುರ್ಘಟನೆ ನಡೆದಿದ್ದು, ಸುತ್ತಮುತ್ತ ಯಾರೂ ಇರಲಿಲ್ಲ. ಹಾಗಾಗಿ ಕೂಗಿಕೊಂಡ್ರೂ ಯಾರೊಬ್ಬರೂ ತಕ್ಷಣಕ್ಕೆ ಗ್ರೀಷ್ಮಾ ಸಹಾಯಕ್ಕೆ ಬಂದಿಲ್ಲ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...