alex Certify
ಕನ್ನಡ ದುನಿಯಾ       Mobile App
       

Kannada Duniya

ಸರ್ಜರಿ ಬಳಿಕ ಹೊರಬಿದ್ದಿದೆ ಮಹಿಳೆಯ ಕಣ್ಣಿನಲ್ಲಿದ್ದ ಹುಳ

eye

ವೈದ್ಯಲೋಕಕ್ಕೆ ಸವಾಲಾಗುವಂತಹ ಹಲವು ಪ್ರಕರಣಗಳು ಬೆಳಕಿಗೆ ಬರ್ತಾನೇ ಇವೆ. ಕೇರಳದಲ್ಲಿ ಕೂಡ ವೈದ್ಯರನ್ನೇ ಬೆಚ್ಚಿಬೀಳಿಸುವಂತಹ ಘಟನೆಯೊಂದು ನಡೆದಿದೆ. ಲಲಿತಾ ಎಂಬ ಮಹಿಳೆಗೆ ಕೆಲವು ದಿನಗಳಿಂದ ಕಣ್ಣಿನಲ್ಲಿ ಒಂದು ರೀತಿಯ ಉರಿ, ಕಿರಿಕಿರಿ ಉಂಟಾಗುತ್ತಿತ್ತು.

ಅದನ್ನು ತಡೆಯಲಾಗದೇ ಆಕೆ ಎನಾರ್ಕುಲಂ ಜನರಲ್ ಆಸ್ಪತ್ರೆಗೆ ಬಂದಿದ್ದಾಳೆ. ಕಣ್ಣುಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದ ವೈದ್ಯರೇ ಶಾಕ್ ಆಗಿದ್ರು. ಯಾಕಂದ್ರೆ ಲಲಿತಾಳ ಕಣ್ಣಿನಲ್ಲಿ ಹುಳವೊಂದು ಅಡಗಿ ಕೂತಿತ್ತು. ನಂತರ ಈ 56 ವರ್ಷದ ಮಹಿಳೆಗೆ ತಜ್ಞ ವೈದ್ಯರ ತಂಡ ಶಸ್ತ್ರಚಿಕಿತ್ಸೆ ನಡೆಸಿದೆ.

ಅನಸ್ತೇಶಿಯಾ ನೀಡಿ ಸರ್ಜರಿ ಮಾಡಿದ ವೈದ್ಯರು, ಕೇವಲ 10 ನಿಮಿಷಗಳಲ್ಲಿ  ಕಣ್ಣಿನಲ್ಲಿದ್ದ ಹುಳವನ್ನು ಹೊರಕ್ಕೆ ತೆಗೆದಿದ್ದಾರೆ. ಈ ಹುಳ 70 ಮಿಲಿ ಮೀಟರ್ ಉದ್ದವಿತ್ತು. ಇನ್ನು ಸ್ವಲ್ಪ ತಡವಾಗಿದ್ರೂ ಮಹಿಳೆ ಆನೆಕಾಲು ರೋಗಕ್ಕೆ ತುತ್ತಾಗುವ ಸಾಧ್ಯತೆ ಇತ್ತು. ಸಕಾಲಕ್ಕೆ ವೈದ್ಯರ ಬಳಿ ಬಂದಿದ್ದರಿಂದ ಬಚಾವ್ ಆಗಿದ್ದಾಳೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...