alex Certify
ಕನ್ನಡ ದುನಿಯಾ       Mobile App
       

Kannada Duniya

ಉದ್ಯಾನವನದಲ್ಲಿದ್ದ ಯುವ ಜೋಡಿ ಮಾಡಿದ್ದೇನು..?

kerala-couple-use-facebook-live-to-call-out-on-moral-policing-by-copsಯುವ ಜೋಡಿಯೊಂದು ಉದ್ಯಾನವನದಲ್ಲಿ ಕುಳಿತಿದ್ದ ವೇಳೆ ಅವರ ಬಳಿ ಬಂದ ಮಹಿಳಾ ಪೊಲೀಸರಿಬ್ಬರು ಬುದ್ದಿ ಹೇಳಲು ಯತ್ನಿಸಿದ್ದು, ಈ ಸಂದರ್ಭದಲ್ಲಿ ಯುವಕ ಫೇಸ್ ಬುಕ್ ಲೈವ್ ನಲ್ಲಿ ಇದನ್ನು ಪ್ರಸಾರ ಮಾಡಿರುವ ಘಟನೆ ಕೇರಳದ ತಿರುವನಂತಪುರಂನಲ್ಲಿ ನಡೆದಿದೆ.

ಮಂಗಳವಾರದಂದು ತಿರುವನಂತಪುರಂನ ನೇಪಿಯರ್ ಮ್ಯೂಸಿಯಂ ಬಳಿಯಿರುವ ಉದ್ಯಾನವನದಲ್ಲಿ ವಿಷ್ಣು ಹಾಗೂ ಅರ್ತಿ ಕುಳಿತಿದ್ದರು. ಆಗ ಅವರ ಬಳಿ ಬಂದ ಮಹಿಳಾ ಪೊಲೀಸರಿಬ್ಬರು ಅಲ್ಲಿಂದ ತೆರಳುವಂತೆ ಸೂಚಿಸಿದರಲ್ಲದೇ ಈ ರೀತಿ ಮಾಡಬಾರದೆಂದು ತಿಳಿ ಹೇಳಲು ಯತ್ನಿಸಿದ್ದಾರೆ.

ಆಗ ಫೇಸ್ ಬುಕ್ ಲೈವ್ ಗೆ ಬಂದ ವಿಷ್ಣು, ತಾವು ಮಾಡಿರುವ ಅಪರಾಧವಾದರೂ ಏನು ಎಂದು ಪದೇ ಪದೇ ಪ್ರಶ್ನಿಸಿದ್ದಾನೆ. ಇಲ್ಲಿ ಕುಳಿತುಕೊಳ್ಳುವುದು ತಪ್ಪಾ ಎಂದು ಕೇಳಿದ್ದಾನೆ. ಬಳಿಕ ಪುರುಷ ಪೊಲೀಸರೂ ಸ್ಥಳಕ್ಕೆ ಬಂದಿದ್ದು, ಯುವ ಜೋಡಿಯನ್ನು ಠಾಣೆಗೆ ಕರೆದೊಯ್ಯಲಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಅಸಭ್ಯ ವರ್ತನೆ ತೋರಿದ ಪ್ರಕರಣ ದಾಖಲಿಸಿ ಬಿಟ್ಟು ಕಳುಹಿಸಲಾಗಿದೆ.

ಯುವ ಜೋಡಿ ಉದ್ಯಾನವನದಲ್ಲಿ ಸಾರ್ವಜನಿಕವಾಗಿಯೇ ಪರಸ್ಪರ ಮುತ್ತಿಡುತ್ತಿದ್ದರು ಎಂದು ಪೊಲೀಸರು ಆರೋಪಿಸಿದರೆ ಆ ರೀತಿ ಏನೂ ನಡೆದಿಲ್ಲವೆಂದು ವಿಷ್ಣು ಹೇಳುತ್ತಿದ್ದಾನೆ. ಫೇಸ್ ಬುಕ್ ನಲ್ಲಿರುವ ವಿಡಿಯೋವನ್ನು ಈಗಾಗಲೇ ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...