alex Certify
ಕನ್ನಡ ದುನಿಯಾ       Mobile App
       

Kannada Duniya

ವಿವಾಹ ಮಂಟಪಕ್ಕೆ ಹೋಗುವ ಮೊದಲು ವಧು ಮಾಡಿದ್ಲು ಈ ಕೆಲಸ

bride in kerala votingಪ್ರತಿಯೊಬ್ಬರ ಜೀವನದಲ್ಲೂ ವಿವಾಹವೆಂಬುದು ಒಂದು ಮಹತ್ವದ ಘಟ್ಟ. ವಿವಾಹಕ್ಕಾಗಿ ತಿಂಗಳುಗಟ್ಟಲೇ ತಯಾರಿ ನಡೆಯುತ್ತದೆ. ವಿವಾಹ ಮಂಟಪ ನಿಗದಿ ಮಾಡುವುದರಿಂದ ಹಿಡಿದು ನೆಂಟರಿಸ್ಟರನ್ನು ಆಹ್ವಾನಿಸುವವರೆಗೆ ಪೋಷಕರು ಬ್ಯುಸಿಯಾದರೆ ತಮ್ಮ ಆಲಂಕಾರ, ಆಭರಣ, ಧರಿಸಬೇಕಾದ ವಸ್ತ್ರದ ಆಯ್ಕೆ ಕುರಿತು ವಧು- ವರರೂ ತಲ್ಲೀನರಾಗಿರುತ್ತಾರೆ. ಆದರೆ ಇಂತಹ ಬ್ಯುಸಿಯ ನಡುವೆಯೂ ಕೇರಳದ ವಧು ಮಾಡಿರುವ ಈ ಕೆಲಸ ಎಲ್ಲರಿಂದಲೂ ಮೆಚ್ಚುಗೆ ಪಡೆದಿದೆ.

ಕೇರಳ ವಿಧಾನಸಭಾ ಚುನಾವಣೆಗೆ ಇಂದು ಮತದಾನ ನಡೆಯುತ್ತಿದೆ. ಇದೇ ದಿನದಂದು 25 ವರ್ಷದ ಅನುವಿನ ವಿವಾಹ ನಿಗದಿಯಾಗಿತ್ತು. ಸರಿ, ವಿವಾಹ ಮಂಟಪಕ್ಕೆ ಹೋಗುವ ಮುನ್ನ ಅನು ಬ್ಯೂಟಿ ಪಾರ್ಲರ್ ಗೆ ಹೋಗಿ ಅಲಂಕಾರ ಮಾಡಿಸಿಕೊಂಡಿದ್ದಾರೆ. ಆದರೆ ಅನು ತಾವು ಮಾಡಬೇಕಾದ ಮತ್ತೊಂದು ಮುಖ್ಯ ಕಾರ್ಯದ ಕುರಿತೂ ಚಿಂತನೆ ನಡೆಸಿದ್ದಾರೆ. ಬ್ಯೂಟಿ ಪಾರ್ಲರ್ ನಿಂದ ವಿವಾಹ ಮಂಟಪಕ್ಕೆ ತೆರಳುವ ಮುನ್ನ ತಮ್ಮ ಮತಗಟ್ಟೆಯಿದ್ದ ಸ್ಥಳಕ್ಕೆ ತೆರಳಿ ಮತ ಚಲಾಯಿಸಿದ್ದಾರೆ.

ವಿವಾಹದ ಪೋಷಾಕಿನಲ್ಲೇ ತಾವು ಮತದಾನ ಮಾಡಿದ ಬೆರಳನ್ನು ಮಾಧ್ಯಮ ಪ್ರತಿನಿಧಿಗಳಿಗೆ ಹೆಮ್ಮೆಯಿಂದ ತೋರಿಸಿದ ಅನು, ನನ್ನ ಮತದಾನದ ಹಕ್ಕನ್ನು ಚಲಾಯಿಸಿರುವುದಕ್ಕೆ ಸಂತಸವಾಗುತ್ತಿದೆ ಎಂದಿದ್ದಾರೆ. ಬಳಿಕ ಕಾರಿನಲ್ಲಿ ಅಲ್ಲಿಂದ 1 ಗಂಟೆ ಪ್ರಯಾಣದ ದೂರವಿದ್ದ ವಿವಾಹ ಮಂಟಪಕ್ಕೆ ಸಂಬಂಧಿಗಳ ಜೊತೆ ತೆರಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...