alex Certify
ಕನ್ನಡ ದುನಿಯಾ       Mobile App
       

Kannada Duniya

ಅಪ್ರಾಪ್ತನ ಸಂಗ ಬೆಳೆಸಿದ್ದ ಯುವತಿ ಈಗ ಪೊಲೀಸರ ಅತಿಥಿ

girl

ಅಪ್ರಾಪ್ತ ಬಾಲಕನ ಜೊತೆ ವಾಸಿಸ್ತಾ ಇದ್ದ 21 ವರ್ಷದ ಯುವತಿಯೊಬ್ಬಳನ್ನು ಕೇರಳದ ಕೊಟ್ಟಾಯಂನಲ್ಲಿ ಪೋಕ್ಸೋ ಕಾಯ್ದೆಯಡಿ ಪೊಲೀಸರು ಬಂಧಿಸಿದ್ದಾರೆ. 17 ವರ್ಷದ ಆ ಬಾಲಕನ ತಾಯಿ ಯುವತಿ ವಿರುದ್ಧ ಪ್ರಕರಣ ದಾಖಲಿಸಿದ್ಲು. ತನ್ನ ಮಗನ ಮೇಲೆ ಯುವತಿ ಲೈಂಗಿಕ ದೌರ್ಜನ್ಯ ಎಸಗಿದ್ದಾಳೆಂದು ಆರೋಪಿಸಿದ್ದಳು.

17 ವರ್ಷದ ಆ ಹುಡುಗನನ್ನು ಯುವತಿ ಪ್ರೀತಿಸ್ತಾ ಇದ್ಲಂತೆ. ಇಬ್ಬರೂ ಒಂದೇ ಮನೆಯಲ್ಲಿ ವಾಸವಾಗಿದ್ರು. ಬಾಗಿಲು ತೆರೆಯಲು ನಿರಾಕರಿಸಿದ ಇಬ್ಬರೂ ಮನೆಯೊಳಗೆ ಅಡಗಿ ಕುಳಿತಿದ್ರು. ನಂತರ ಪೊಲೀಸರು ಬಾಗಿಲು ಒಡೆದು ಒಳಕ್ಕೆ ಪ್ರವೇಶಿಸಿದ್ದಾರೆ. ಯುವತಿಯನ್ನು ಬಂಧಿಸಿ ಕರೆತಂದಿದ್ದಾರೆ.

ಯುವತಿ ಎನಾರ್ಕುಲಂ ನಿವಾಸಿಯಾಗಿದ್ದು, ಆಕೆಯನ್ನು ನ್ಯಾಯಾಧೀಶರೆದುರು ಹಾಜರುಪಡಿಸಲಾಯ್ತು. ನಂತರ ಅವಳನ್ನು ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಆಕೆಯ ಪ್ರಿಯಕರ ಅಪ್ರಾಪ್ತನಾಗಿರೋದ್ರಿಂದ ಆತನನ್ನು ಬಾಲಾಪರಾಧ ನ್ಯಾಯ ಮಂಡಳಿಗೆ ಹಸ್ತಾಂತರಿಸಲಾಗಿದೆ. ಫೇಸ್ಬುಕ್ ಮೂಲಕ ಇಬ್ಬರ ಮಧ್ಯೆ ಸಂಬಂಧ ಶುರುವಾಗಿತ್ತು ಅಂತಾ ಪೊಲೀಸರು ತಿಳಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...