alex Certify
ಕನ್ನಡ ದುನಿಯಾ       Mobile App
       

Kannada Duniya

ಭ್ರಷ್ಟ ಪೊಲೀಸರಿಗೆ ನಡುಕ ಹುಟ್ಟಿಸಿದ ಖಡಕ್ ಸಿಎಂ

cops

ಉತ್ತರಪ್ರದೇಶದ ನೂತನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕಾನೂನು ಪರಿಪಾಲಿಸದ ಪೊಲೀಸರಿಗೆ ಬಿಸಿ ಮುಟ್ಟಿಸ್ತಿದ್ದಾರೆ. ಇವತ್ತು ಹಜರತ್ ಗಂಜ್ ಪೊಲೀಸ್ ಠಾಣೆಗೆ ಯೋಗಿ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಕಾನೂನು ಸುವ್ಯವಸ್ಥೆ ಕಾಪಾಡಲು ಖಾಕಿ ಪಡೆ ಯಾವ ರೀತಿ ಕೆಲಸ ಮಾಡ್ತಾ ಇದೆ ಅನ್ನೋದನ್ನು ಖುದ್ದಾಗಿ ತಿಳಿದುಕೊಳ್ಳಲು ಬಂದಿರೋದಾಗಿ ಹೇಳಿದ ಸಿಎಂ, ಕರ್ತವ್ಯ ಭ್ರಷ್ಟ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳೋದಾಗಿ ಎಚ್ಚರಿಸಿದ್ದಾರೆ.

ಜನರ ಒಳಿತಿಗಾಗಿ ಯಾವ ಕ್ರಮಕ್ಕೂ ಹಿಂದೇಟು ಹಾಕುವುದಿಲ್ಲ ಅಂತಾ ಸ್ಪಷ್ಟಪಡಿಸಿದ್ದಾರೆ. ಯಾರ್ಯಾರು ಕರ್ತವ್ಯಕ್ಕೆ ಹಾಜರಾಗಿದ್ದಾರೆ ಅನ್ನೋ ಮಾಹಿತಿ ಪಡೆದ ಯೋಗಿ, ಕ್ರೈಂ ಬ್ರಾಂಚ್ ಹಾಗೂ ಸೈಬರ್ ಸೆಲ್ ಗೂ ವಿಸಿಟ್ ಕೊಟ್ರು. ಇದು ಕೇವಲ ಆರಂಭ ಅಷ್ಟೆ ಅಂತಾ ಪೊಲೀಸರಿಗೆ ವಾರ್ನ್ ಮಾಡಿದ್ರು.

ಉತ್ತರಪ್ರದೇಶ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ್ ಅಧಿಕಾರ ವಹಿಸಿಕೊಂಡ 5 ದಿನಗಳಲ್ಲಿ 100ಕ್ಕೂ ಹೆಚ್ಚು ಪೊಲೀಸರನ್ನು ವಜಾ ಮಾಡಲಾಗಿದೆ. ಲಖ್ನೌನಲ್ಲಿ 7 ಇನ್ಸ ಪೆಕ್ಟರ್ ಗಳು ಸಸ್ಪೆಂಡ್ ಆಗಿದ್ದಾರೆ. ಕೆಟ್ಟ ಸ್ವಭಾವದ, ಭ್ರಷ್ಟ ಅಧಿಕಾರಿಗಳನ್ನೆಲ್ಲ ಯೋಗಿ ಮನೆಗೆ ಕಳಿಸ್ತಿದ್ದಾರೆ.

ಶಿಸ್ತು ಮತ್ತು ಸ್ವಚ್ಛತೆಯನ್ನು ಕಾಪಾಡಿಕೊಳ್ಳುವಂತೆ ಎಲ್ಲಾ ಸರ್ಕಾರಿ ನೌಕರರಿಗೂ ಈಗಾಗ್ಲೇ ಮುಖ್ಯಮಂತ್ರಿಗಳು ಸೂಚಿಸಿದ್ದಾರೆ. ನಿನ್ನೆ ಹಳೆ ಸಿಎಂ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ಅವ್ಯವಸ್ಥೆ ಮತ್ತು ಕೊಳಕು ನೋಡಿ ಗರಂ ಆದ ಯೋಗಿ, ಸರ್ಕಾರಿ ಕಚೇರಿಗಳಲ್ಲಿ ತಂಬಾಕು, ಪಾನ್ ಮಸಾಲಾ, ಗುಟ್ಕಾ ಸೇವನೆಯನ್ನೇ ನಿಷೇಧಿಸಿದ್ರು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...