alex Certify
ಕನ್ನಡ ದುನಿಯಾ       Mobile App
       

Kannada Duniya

ಕೇದಾರನಾಥನ ದರ್ಶನ ಶುರು : ಈ ಬಾರಿ ಭಕ್ತರಿಗೆ ವಿಶೇಷ ವ್ಯವಸ್ಥೆ

ಮಂತ್ರ, ಜಪ, ಶ್ಲೋಕದೊಂದಿಗೆ ಕೇದಾರನಾಥ ಧಾಮದ ಬಾಗಿಲು ಭಕ್ತರಿಗೆ ತೆರೆದಿದೆ. ಭಾನುವಾರ ಬೆಳಿಗ್ಗೆ 6 ಗಂಟೆಗೆ ಕೇದಾರನಾಥದ ಬಾಗಿಲನ್ನು ತೆರೆಯಲಾಗಿದೆ. ಗವರ್ನರ್ ಕೆ.ಕೆ.ಪಾಲ್ ಉಪಸ್ಥಿತಿಯಲ್ಲಿ ಕೇದಾರನಾಥದ ಬಾಗಿಲು ತೆರೆದಿದೆ.

ದೇಶ-ವಿದೇಶಗಳಿಂದ ಲಕ್ಷಾಂತರ ಭಕ್ತರು ಕೇದಾರನಾಥಕ್ಕೆ ಬಂದಿದ್ದಾರೆ. ಚಳಿಗಾಲದಲ್ಲಿ ಕೇದಾರನಾಥನ ದರ್ಶನ ಬಂದ್ ಆಗಿತ್ತು. ಉತ್ತರಾಖಂಡದ ಮುಖ್ಯಮಂತ್ರಿ ತ್ರಿವೇಂದ್ರಂ ಸಿಂಗ್ ಶನಿವಾರ ಪತ್ರಿಕಾಗೋಷ್ಠಿ ನಡೆಸಿ ಈ ವಿಷ್ಯ ತಿಳಿಸಿದ್ದರು. ಕೇದಾರನಾಥಕ್ಕೆ ಬರುವ ಭಕ್ತಾಳುಗಳಿಗೆ ಸ್ವಾಗತ ಕೋರಿದ್ದರು.

ಈ ಬಾರಿ ಕೇದಾರನಾಥದ ವಿಶೇಷತೆಗಳೇನು ಎಂಬುದನ್ನು ಸಿಎಂ ಹೇಳಿದ್ದಾರೆ. ಈ ಬಾರಿ ಭಕ್ತಾದಿಗಳ ಪ್ರವಾಸವನ್ನು ಆಸಕ್ತಿದಾಯ ಹಾಗೂ ಸ್ಮರಣೀಯ ಮಾಡಲು ಪ್ರತಿದಿನ ಶಿವನ ಆಧಾರಿತ ಲೇಸರ್ ಪ್ರದರ್ಶನ ಆಯೋಜನೆ ಮಾಡುವುದಾಗಿ ಸಿಎಂ ಹೇಳಿದ್ದಾರೆ. ಬೇರೆ ಬೇರೆ ಬಣ್ಣದಲ್ಲಿ ಶಿವನ ಗುಣಗಾನ ನಡೆಯಲಿದೆ. ಕೇದಾರನಾಥಕ್ಕೆ ಬರುವ ಭಕ್ತರಿಗೆ ಎಲ್ಲ ರೀತಿಯ ವ್ಯವಸ್ಥೆ ಹಾಗೂ ಭದ್ರತೆ ಒದಗಿಸುವುದಾಗಿಯೂ ಸಿಎಂ ಭರವಸೆ ನೀಡಿದ್ದಾರೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...