alex Certify
ಕನ್ನಡ ದುನಿಯಾ       Mobile App
       

Kannada Duniya

ನಿರುದ್ಯೋಗಿಗಳಿಗೆ ಕೆಸಿಆರ್ ನೀಡಿದ್ದಾರೆ ಸ್ವಾತಂತ್ರ್ಯೋತ್ಸವದ ಗಿಫ್ಟ್

kcr-1

ನಿರುದ್ಯೋಗಿ ಯುವಕ- ಯುವತಿಯರಿಗೆ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಸ್ಪೆಷಲ್ ಗಿಫ್ಟ್ ಕೊಟ್ಟಿದ್ದಾರೆ. 84,876 ಸರ್ಕಾರಿ ಉದ್ಯೋಗಗಳನ್ನು ಕಲ್ಪಿಸುವುದಾಗಿ ಭರವಸೆ ನೀಡಿದ್ದಾರೆ. ಈಗಾಗ್ಲೇ ತೆಲಂಗಾಣ ಸರ್ಕಾರ 27,660 ಜನರನ್ನು ನೇಮಕ ಮಾಡಿಕೊಂಡಿದೆ.

ಇದರೊಂದಿಗೆ ಕೆಸಿಆರ್ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಒಟ್ಟು 1,12,536 ಜನರಿಗೆ ಉದ್ಯೋಗ ಕಲ್ಪಿಸಿದಂತಾಗುತ್ತದೆ. ಪ್ರತ್ಯೇಕ ರಾಜ್ಯ ಚಳವಳಿ ಸಂದರ್ಭದಲ್ಲಿ ಒಂದು ಲಕ್ಷಕ್ಕೂ ಅಧಿಕ ಮಂದಿಗೆ ಉದ್ಯೋಗ ಕಲ್ಪಿಸುವುದಾಗಿ ಚಂದ್ರಶೇಖರ್ ರಾವ್ ಭರವಸೆ ನೀಡಿದ್ದರು.

ನಿನ್ನೆ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ರಾಜ್ಯವನ್ನುದ್ದೇಶಿಸಿ ಮಾತನಾಡಿದ ಕೆಸಿಆರ್, ಹೊಸ ಉದ್ಯೋಗ ನೇಮಕಾತಿಯ ಘೋಷಣೆ ಮಾಡಿದ್ದಾರೆ. ತೆಲಂಗಾಣದ ಅಭಿವೃದ್ಧಿಯೇ ತಮ್ಮ ಗುರಿ ಎಂದ ಅವರು, ಈ ಹಿಂದಿನ ಸರ್ಕಾರಗಳನ್ನು ಟೀಕೆ ಮಾಡಿದ್ರು. ಹೈದ್ರಾಬಾದ್ ನಲ್ಲಿ ಜಾಗತಿಕ ವಾಣಿಜ್ಯೋದ್ಯಮಿಗಳ ಶೃಂಗಸಭೆ ನಡೆಯಲಿದ್ದು, ಅದರಲ್ಲಿ ಇವಾಂಕಾ ಟ್ರಂಪ್ ಕೂಡ ಭಾಗವಹಿಸುತ್ತಿರುವುದು ರಾಜ್ಯಕ್ಕೆ ಖುಷಿಯ ವಿಚಾರ ಅಂತಾ ಹೇಳಿದ್ರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...