alex Certify
ಕನ್ನಡ ದುನಿಯಾ       Mobile App
       

Kannada Duniya

ನೆಲ ಒರೆಸೋದಕ್ಕೂ ಲಾಯಕ್ಕಿಲ್ಲ ಸಿಎಂ ಕೊಟ್ಟ ಸೀರೆ!

ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರ ಬಾತುಕಮ್ಮ ಸೀರೆ ಯೋಜನೆ ವಿವಾದಗಳ ಗೂಡಾಗಿದೆ. ಬಡತನ ರೇಖೆಗಿಂತ ಕೆಳಗಿರುವ 1.5 ಲಕ್ಷ ಮಹಿಳೆಯರಿಗೆ ದಸರಾ ಉಡುಗೊರೆಯಾಗಿ ಸೀರೆ ವಿತರಿಸಲಾಗಿದೆ. ಆದ್ರೆ ಸೀರೆ ಅತ್ಯಂತ ಕಳಪೆ ಗುಣಮಟ್ಟದ್ದಾಗಿದ್ದು, ಮಹಿಳೆಯರ ಆಕ್ರೋಶಕ್ಕೆ ಕಾರಣವಾಗಿದೆ.

ಹಬ್ಬಕ್ಕೆ ಒಳ್ಳೆ ಸೀರೆ ಸಿಗುತ್ತೆ ಅಂತಾ ಖುಷಿಯಲ್ಲಿದ್ದವರೆಲ್ಲ ಈಗ ನಿರಾಸೆ ಅನುಭವಿಸಿದ್ದಾರೆ. ಸಿಎಂ ಕೊಟ್ಟ ಸೀರೆ ನೆಲ ಒರೆಸೋದಕ್ಕೂ ಲಾಯಕ್ಕಿಲ್ಲ ಅನ್ನೋ ಮಾತುಗಳು ಕೇಳಿ ಬಂದಿವೆ. ಕೆಲವರು ತಮಗೆ ಇಂಥಾ ಕಳಪೆ ಸೀರೆ ಬೇಡವೇ ಬೇಡ ಅಂತಾ ತಿರಸ್ಕರಿಸಿದ್ದಾರೆ.

ಇನ್ನು ಕೆಲವರು ಸುಟ್ಟು ಹಾಕಿದ್ದಾರೆ. ಒಂದಷ್ಟು ಮಂದಿ ನೆಲ ಮತ್ತು ವಾಹನವನ್ನು ಆ ಸೀರೆಯಲ್ಲಿ ಒರೆಸುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ. ಇನ್ನೊಂದಷ್ಟು ಸೀರೆಗಳು ಕಸದ ಬುಟ್ಟಿ ಸೇರಿವೆ. ಸರ್ಕಾರ 222 ಕೋಟಿ ಖರ್ಚು ಮಾಡಿ 1.05 ಲಕ್ಷ ಸೀರೆ ಖರೀದಿಸಿದೆ.

ಆದ್ರೆ ಸೀರೆಯ ಗುಣಮಟ್ಟ ನೋಡಿದವರೆಲ್ಲ, ಈ ಯೋಜನೆಯಲ್ಲಿ ಗೋಲ್ ಮಾಲ್ ನಡೆದಿದೆ ಅನ್ನೋ ಅನುಮಾನ ವ್ಯಕ್ತಪಡಿಸಿದ್ದಾರೆ. ಕೆಲಸ ಬಿಟ್ಟು ಒಂದಿಡೀ ದಿನ ಕ್ಯೂನಲ್ಲಿ ನಿಂತು ಸೀರೆ ಪಡೆದವರು ಸಿಎಂಗೆ ಹಿಡಿಶಾಪ ಹಾಕ್ತಿದ್ದಾರೆ. ಸೀರೆಯ ಬೆಲೆ ಅಬ್ಬಬ್ಬಾ ಅಂದ್ರೂ 50-60 ರೂಪಾಯಿ ಇರಬಹುದು ಎನ್ನುತ್ತಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...