alex Certify
ಕನ್ನಡ ದುನಿಯಾ       Mobile App
       

Kannada Duniya

ಗುಜರಾತ್ ಚುನಾವಣಾ ಪ್ರಚಾರಕ್ಕೆ ಮೋದಿ ಹೊಸ ಅಸ್ತ್ರ

ಪ್ರಧಾನಿ ನರೇಂದ್ರ ಮೋದಿ ಈ ಬಾರಿ ಗುಜರಾತ್ ಚುನಾವಣಾ ಪ್ರಚಾರವನ್ನು ವಿಭಿನ್ನವಾಗಿ ಮಾಡ್ತಿದ್ದಾರೆ. ಖುದ್ದು ತಾವೇ ಬಿಜೆಪಿ ಕಾರ್ಯಕರ್ತರಿಗೆ ಫೋನ್ ಕರೆ ಮಾಡಿ ಮಾತನಾಡ್ತಿದ್ದಾರೆ. ಸಮಾವೇಶಗಳಲ್ಲಿ 3ಡಿ ಹೋಲೋಗ್ರಾಫಿಕ್ ಪ್ರೊಜೆಕ್ಷನ್, ಚಾಯ್ ಪೆ ಚರ್ಚಾ ಇವೆಲ್ಲದಕ್ಕಿಂತ್ಲೂ ಭಿನ್ನವಾದ ಪ್ರಯತ್ನ ಇದು.

ಪ್ರಧಾನಿ ಮೋದಿ ಮಾಡ್ತಿರೋ ಈ ವೈಯಕ್ತಿಕ ಫೋನ್ ಕರೆಗಳು ಬಿಜೆಪಿ ಕಾರ್ಯಕರ್ತರು ಹಾಗೂ ಗುಜರಾತ್ ಜನರ ಮೇಲೆ ಬಹಳ ಪ್ರಭಾವ ಬೀರುತ್ತಿವೆ. ಇದರಿಂದ ಪಕ್ಷಕ್ಕೆ ಹೊಸ ಶಕ್ತಿ ಬಂದಿದೆ. ಮೋದಿ, ರಾಹುಲ್ ಗಾಂಧಿಗಿಂತ್ಲೂ ವಿಶಿಷ್ಟ ಮತ್ತು ವಿಭಿನ್ನ ವ್ಯಕ್ತಿತ್ವದ ನಾಯಕ ಅನ್ನೋದಕ್ಕೆ ಇದೇ ಸಾಕ್ಷಿ ಅಂತಾ ಬಿಜೆಪಿ ಹೇಳಿಕೊಂಡಿದೆ.

ನರೇಂದ್ರ ಮೋದಿ 2001 ರಿಂದ 2014ರವರೆಗೂ ಗುಜರಾತ್ ಮುಖ್ಯಮಂತ್ರಿಯಾಗಿದ್ದರು. ಜನರೊಂದಿಗಿನ ಆ ಹಳೆಯ ಭಾವನಾತ್ಮಕ ಸಂಬಂಧವನ್ನು ಫೋನ್ ಕರೆಯ ಮೂಲಕ ಮೆಲುಕು ಹಾಕುವ ಪ್ರಯತ್ನ ಮಾಡ್ತಿದ್ದಾರೆ. ಮೋದಿ ಅವರ ಫೋನ್ ಕರೆಯ ಆಡಿಯೋ ಕ್ಲಿಪ್ ಗಳು ಈಗಾಗ್ಲೇ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿವೆ. ಈಗಾಗ್ಲೇ ಮೋದಿ ಇಂತ 8-10 ಕರೆಗಳನ್ನು ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...