alex Certify
ಕನ್ನಡ ದುನಿಯಾ       Mobile App
       

Kannada Duniya

ಎದೆ ನಡುಗಿಸುತ್ತೆ ಕಾಶ್ಮೀರಿ ಯುವಕನ ‘ಡೆಡ್ಲಿ ಸ್ಟಂಟ್’…!

ವೇಗವಾಗಿ ಚಲಿಸುತ್ತಿರುವ ರೈಲಿನ ಎದುರು ಕಾಶ್ಮೀರಿ ಯುವಕನೊಬ್ಬ ಮಾಡಿರುವ ಡೆಡ್ಲಿ ಸ್ಟಂಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಎದುರಿನಿಂದ ಪ್ರಯಾಣಿಕ ರೈಲೊಂದು ವೇಗವಾಗಿ ಬರುತ್ತಿರುವ ವೇಳೆ ಈ ಯುವಕ ರೈಲು ಹಳಿಗಳ ಮೇಲೆ ಅಡ್ಡಲಾಗಿ ಮಲಗಿದ್ದು, ರೈಲು ಈತನ ಮೇಲಿನಿಂದಲೇ ಹಾದು ಹೋಗಿದೆ. ರೈಲು ಹಾದು ಹೋದ ನಂತರ ಎದ್ದು ನಿಂತು ಯುವಕ ಕೇಕೆ ಹಾಕಿದ್ದು, ಈ ಎಲ್ಲಾ ದೃಶ್ಯಗಳನ್ನು ಆತನ ಜೊತೆಗಿದ್ದ ಮತ್ತೊಬ್ಬ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾನೆ.

ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಹಲವರು ಯುವಕನ ಕೃತ್ಯಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜಮ್ಮು-ಕಾಶ್ಮೀರದ ಮಾಜಿ ಮುಖ್ಯ ಮಂತ್ರಿ ಒಮರ್ ಅಬ್ದುಲ್ಲಾ ಕೂಡ ಈ ಕುರಿತು ಟ್ವೀಟ್ ಮಾಡಿದ್ದು, ಯುವಕನ ನಡೆಯನ್ನು ಖಂಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...