alex Certify
ಕನ್ನಡ ದುನಿಯಾ       Mobile App
       

Kannada Duniya

ಮನೆಗೇ ನುಗ್ಗಿ ಬಿಎಸ್ಎಫ್ ಯೋಧನನ್ನು ಕೊಂದ ಉಗ್ರರು

ಜಮ್ಮು-ಕಾಶ್ಮೀರದಲ್ಲಿ ಅಪರಿಚಿತ ಬಂಧೂಕುಧಾರಿಗಳು ಬಿಎಸ್ಎಫ್ ಯೋಧನನ್ನು ಆತನ ಮನೆಯಲ್ಲೇ ಹತ್ಯೆ ಮಾಡಿದ್ದಾರೆ. ಬಂಡಿಪೋರಾ ಜಿಲ್ಲೆಯ ಹಾಜಿನ್ ಎಂಬಲ್ಲಿ ನಿನ್ನೆ ಸಂಜೆ ಈ ಕೃತ್ಯ ನಡೆದಿದೆ. ದಾಳಿಯಲ್ಲಿ ಯೋಧನ ಕುಟುಂಬದ ಮೂವರು ಸದಸ್ಯರು ಕೂಡ ಗಾಯಗೊಂಡಿದ್ದಾರೆ.

ಹತ್ಯೆಯಾದ ಬಿಎಸ್ಎಫ್ ಪೇದೆ ರಮೀಝ್ ಪ್ಯಾರೆ ರಜೆ ತೆಗೆದುಕೊಂಡಿದ್ರು, ಮನೆಯಲ್ಲೇ ಇದ್ರು. 3-4 ಉಗ್ರರು ಬಂಧೂಕು ಸಮೇತ ಯೋಧನ ಮನೆಗೇ ನುಗ್ಗಿದ್ದಾರೆ. ಅವರನ್ನು ಹೊರಕ್ಕೆ ಎಳೆದುಕೊಂಡು ಬಂದು ಗುಂಡು ಹಾರಿಸಿದ್ದಾರೆ.

ಘಟನೆ ನಡೆದ ಹಿಂದಿನ ದಿನ ರಾತ್ರಿ ಉತ್ತರ ಕಾಶ್ಮೀರದಲ್ಲಿ ಭಯೋತ್ಪಾದಕರಿಗಾಗಿ ಶೋಧ ಕಾರ್ಯ ನಡೆದಿತ್ತು. ಆ ಕಾರ್ಯಾಚರಣೆಯಲ್ಲಿ ಯೋಧ ರಮೀಝ್ ಕೂಡ ಪಾಲ್ಗೊಂಡಿದ್ದರು ಎಂಬ ಶಂಕೆ ಮೇಲೆ ಉಗ್ರರು ಅವರನ್ನು ಹತ್ಯೆ ಮಾಡಿದ್ದಾರೆ.

ಸದ್ಯ ಹಂತಕರಿಗಾಗಿ ಹುಡುಕಾಟ ಶುರುವಾಗಿದೆ. ಆ ಭಾಗದಲ್ಲಿ ಭದ್ರತಾ ಪಡೆಗಳು ತೀವ್ರ ಶೋಧ ನಡೆಸುತ್ತಿವೆ. ಕಳೆದ ಮೇ ತಿಂಗಳಿನಲ್ಲಿ ಶೋಪಿಯಾನ್ ನಲ್ಲಿ ಉಗ್ರರು ಸೇನಾಧಿಕಾರಿಯೊಬ್ಬರನ್ನು ಅಪಹರಿಸಿ ಹತ್ಯೆ ಮಾಡಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...