alex Certify
ಕನ್ನಡ ದುನಿಯಾ       Mobile App
       

Kannada Duniya

ಕಾರ್ತಿ ಚಿದಂಬರಂಗೆ ನಿದ್ದೆ ಮಾಡಲು ಬಿಡ್ತಿಲ್ವಾ ಸಿಬಿಐ…?

ಕೇಂದ್ರದ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ಸದ್ಯ ಸಿಬಿಐ ಕಸ್ಟಡಿಯಲ್ಲಿದ್ದಾರೆ. ಕಾರ್ತಿಯನ್ನು ಸದಾ ಬೆಳಕಿನಲ್ಲೇ ಇರಿಸಿರುವ ಸಿಬಿಐ ಅಧಿಕಾರಿಗಳು, ನಿದ್ದೆ ಮಾಡಲು ಅವಕಾಶ ಕೊಡುತ್ತಿಲ್ಲ ಅಂತಾ ಕಾಂಗ್ರೆಸ್ ಮುಖಂಡ ಅಭಿಷೇಕ್ ಮನು ಸಿಂಘ್ವಿ ಆರೋಪಿಸಿದ್ದಾರೆ.

ಇದರಿಂದ ಕಾರ್ತಿ ಆರೋಗ್ಯ ಹದಗೆಡುತ್ತಿದೆ ಅಂತಾ ಹೇಳಿದ್ದಾರೆ. ಸಿಬಿಐ ಜಡ್ಜ್ ಸುನಿಲ್ ರಾಣಾ, ಕಾರ್ತಿಯನ್ನು ಇನ್ನೂ 3 ದಿನಗಳ ಕಾಲ ತನಿಖಾಧಿಕಾರಿಗಳ ವಶಕ್ಕೆ ಒಪ್ಪಿಸಿದ್ದಾರೆ. ವಿಚಾರಣೆ ಸಂದರ್ಭದಲ್ಲಿ ಮಾತನಾಡಿದ ಸಿಂಘ್ವಿ, ರಾತ್ರಿ 2.30 ರವರೆಗೂ ಕಾರ್ತಿಗೆ ನಿದ್ದೆ ಮಾಡಲು ಅವಕಾಶ ಕೊಡುತ್ತಿಲ್ಲ.

ಇದರಿಂದಾಗಿ ಅವರ ರಕ್ತದೊತ್ತಡ ಏರುಪೇರಾಗುತ್ತಿದೆ ಅಂತಾ ಹೇಳಿದ್ರು. ಕಾರ್ತಿಯನ್ನು ಪ್ರತ್ಯೇಕ ಕೋಣೆಗೆ ಶಿಫ್ಟ್ ಮಾಡಲಾಗಿದೆ. ಅಲ್ಲಿ ನಾಲ್ವರು ಭದ್ರತಾ ಸಿಬ್ಬಂದಿಯನ್ನು ನೇಮಕ ಮಾಡಲಾಗಿದ್ದು, ಕಾರ್ತಿ ನಿದ್ದೆ ಮಾಡದಂತೆ ತಡೆಯಲು ಅವರು ಸದಾ ಮಾತನಾಡುತ್ತಿರುತ್ತಾರೆ, ಅಥವಾ ಕಾರ್ಡ್ಸ್ ಆಡುತ್ತಾರೆ ಅಂತಾ ದೂರಿದ್ರು.

ಕಾರ್ತಿ ಚಿದಂಬರಂ ರಕ್ತದೊತ್ತಡದ ವೈದ್ಯಕೀಯ ವರದಿಯನ್ನು ಪ್ರದರ್ಶಿಸಿದ್ರು. ಕಾರ್ತಿ ಆರೋಗ್ಯ ಹದಗೆಡುತ್ತಿರುವುದರಿಂದ ಮನೆಯ ಆಹಾರ ಸೇವಿಸಲು ಅವಕಾಶ ಕೊಡಬೇಕೆಂದು ಮನವಿ ಮಾಡಿದ್ರು. ಆದ್ರೆ ಇದು ಸಿಬಿಐ ಅಧಿಕಾರಿಗಳಿಗೆ ಬಿಟ್ಟ ವಿಚಾರ ಅಂತಾ ಜಡ್ಜ್ ಸ್ಪಷ್ಟಪಡಿಸಿದ್ರು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...