alex Certify
ಕನ್ನಡ ದುನಿಯಾ       Mobile App
       

Kannada Duniya

ಸಿಬಿಐ ದಾಳಿ ಬೆನ್ನಲ್ಲೇ ಲಂಡನ್ ಗೆ ಹಾರಿದ ಚಿದು ಪುತ್ರ

2_karthi_eps_romani

ಲಂಚ ಹಾಗೂ ಭ್ರಷ್ಟಾಚಾರ ಪ್ರಕರಣದಲ್ಲಿ ಸಿಬಿಐ ತನಿಖೆ ಎದುರಿಸುತ್ತಿರುವ ಕಾಂಗ್ರೆಸ್ ಹಿರಿಯ ನಾಯಕ ಪಿ.ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ದಿಢೀರನೆ ಲಂಡನ್ ಗೆ ಹಾರಿದ್ದಾರೆ. ಅವರ ಮನೆ, ಕಚೇರಿಗಳಲ್ಲೆಲ್ಲ ಸಿಬಿಐ ದಾಳಿ ನಡೆದು ಎರಡು ದಿನಗಳು ಕಳೆಯುವಷ್ಟರಲ್ಲಿ ವಿದೇಶ ಪ್ರಯಾಣ ಕೈಗೊಂಡಿದ್ದಾರೆ. ನಿನ್ನೆ ಸಂಜೆಯೇ ಲಂಡನ್ ಗೆ ತೆರಳಿದ್ದಾರೆ.

ಸ್ನೇಹಿತನ ಜೊತೆಗೆ ಕಾರ್ತಿ ಲಂಡನ್ ಗೆ ಹೋಗಿದ್ದಾರೆ ಎನ್ನಲಾಗ್ತಾ ಇದೆ. ಪುತ್ರನ ಲಂಡನ್ ಭೇಟಿ ಪೂರ್ವ ನಿಗದಿತ ಎಂದಿರುವ ಪಿ.ಚಿದಂಬರಂ ಆದಷ್ಟು ಬೇಗ ಅವರು ವಾಪಸ್ಸಾಗಲಿದ್ದಾರೆ ಅಂತಾ ಸಮರ್ಥಿಸಿಕೊಂಡಿದ್ದಾರೆ. ಅವರ ಪ್ರಯಾಣಕ್ಕೆ ಯಾವುದೇ ನಿರ್ಬಂಧವಿಲ್ಲ ಅಂತಾ ತಿಳಿಸಿದ್ದಾರೆ.

ಪೀಟರ್ ಮುಖರ್ಜಿ ಹಾಗೂ ಇಂದ್ರಾಣಿ ಒಡೆತನದ ಐಎನ್ಎಕ್ಸ್ ಮೀಡಿಯಾಗೆ ಫಾರಿನ್ ಇನ್ವೆಸ್ಟ್ ಮೆಂಟ್ ಪ್ರಮೋಷನ್ ಬೋರ್ಡ್ ನಿಂದ ಕ್ಲಿಯರೆನ್ಸ್ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಕಾರ್ತಿ ಚಿದಂಬರಂರನ್ನು ತನಿಖೆಗೆ ಒಳಪಡಿಸಿದೆ. ಶೀನಾ ಬೋರಾ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೀಟರ್ ಹಾಗೂ ಇಂದ್ರಾಣಿ ಜೈಲಿನಲ್ಲಿದ್ದಾರೆ. ಪೀಟರ್ ಹಾಗೂ ಇಂದ್ರಾಣಿಯಿಂದ ಲಂಚ ಪಡೆದು ಅವರಿಗೆ ತೆರಿಗೆ ತಪ್ಪಿಸಿಕೊಳ್ಳಲು ಕಾರ್ತಿ ಸಹಾಯ ಮಾಡಿದ್ದಾರೆಂಬ ಆರೋಪವಿದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...