alex Certify
ಕನ್ನಡ ದುನಿಯಾ       Mobile App
       

Kannada Duniya

ಅಪರ್ಣ ಯಾದವ್ ನೃತ್ಯಕ್ಕೆ ಕರಣಿ ಸೇನೆ ಆಕ್ರೋಶ

ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಸೊಸೆ ಅಪರ್ಣ ಯಾದವ್ ನೃತ್ಯ ಈಗ ವಿವಾದಕ್ಕೆ ಕಾರಣವಾಗಿದೆ. ಅಪರ್ಣಾ ಯಾದವ್ ವಿವಾದಿತ ಪದ್ಮಾವತಿ ಚಿತ್ರದ ಗೂಮರ್ ಹಾಡಿಗೆ ನೃತ್ಯ ಮಾಡಿದ್ದನ್ನು ಕರಣಿ ಸೇನೆ ಖಂಡಿಸಿದೆ.

ಈ ಬಗ್ಗೆ ಮಾತನಾಡಿದ ಕರಣಿ ಸೇನೆ ಮುಖ್ಯಸ್ಥ ಲೋಕೇಂದ್ರ ಸಿಂಗ್, ನಾವು ಒಂದು ಕಾರಣಕ್ಕೆ ಹೋರಾಟ ಮಾಡುತ್ತಿದ್ದೇವೆ. ಆದ್ರೆ ರಜಪೂತ ಕುಟುಂಬದಲ್ಲಿ ಹುಟ್ಟಿರುವ ಮುಲಾಯಂ ಸಿಂಗ್ ಯಾದವ್ ಸೊಸೆ ಅಪರ್ಣ ಹೀಗೆ ಮಾಡಬಾರದಿತ್ತು. ರಜಪೂತರ ಭಾವನೆಗೆ ಅವರು ಗೌರವ ನೀಡಬೇಕಿತ್ತು ಎಂದಿದ್ದಾರೆ.

ರಾಜಸ್ತಾನದ ಹಾಡಿಗೆ ನೃತ್ಯ ಮಾಡಬಯಸಿದ್ದರೆ ಮೂಲ ರಾಜಸ್ತಾನಿ ಹಾಡಿಗೆ ಅಥವಾ ಬೇರೆ ಯಾವುದಾದ್ರೂ ಹಾಡಿಗೆ ನೃತ್ಯ ಮಾಡಬಹುದಿತ್ತು ಎಂದು ಲೋಕೇಂದ್ರ ಹೇಳಿದ್ದಾರೆ.

ಪದ್ಮಾವತಿ ಚಿತ್ರ ಆರಂಭದಿಂದಲೇ ವಿವಾದದಲ್ಲಿದೆ. ಗೂಮರ್ ನೃತ್ಯ ಮತ್ತಷ್ಟು ವಿವಾದ ಸೃಷ್ಟಿಸಿತ್ತು. ಆದ್ರೆ ಅದೇ ಹಾಡಿಗೆ ಮುಲಾಯಂ ಸೊಸೆ ನೃತ್ಯ ಮಾಡಿರುವುದು ಕರಣಿ ಸೇನೆ ಅಸಮಾಧಾನಕ್ಕೆ ಕಾರಣವಾಗಿದೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...