alex Certify
ಕನ್ನಡ ದುನಿಯಾ       Mobile App
       

Kannada Duniya

ಹಿಂದಿ ಬರದ ಕಾರಣ ಹುಚ್ಚಾಸ್ಪತ್ರೆ ಸೇರಿದ್ಲು ಹುಡುಗಿ

ಇದು ಪದ್ಮಾ ಎಂಬಾಕೆಯ ನೋವಿನ ಕಥೆ. ಪದ್ಮಾ ಶಿಮ್ಲಾದಲ್ಲಿ ಅನುಭವಿಸಿದ ನರಕಯಾತನೆ. ಕನ್ನಡದ ಹುಡುಗಿ ಪದ್ಮಾಳಿಗೆ ಹಿಂದಿ ಬರ್ತಿರಲಿಲ್ಲ. ಆಕೆ ಕನ್ನಡ ಅಲ್ಲಿನ ಜನರಿಗೆ ಅರ್ಥವಾಗ್ತಿರಲಿಲ್ಲ. ಇದೇ ಕಾರಣಕ್ಕೆ ಪದ್ಮಾ ಶಿಮ್ಲಾದ ಹುಚ್ಚಾಸ್ಪತ್ರೆಯಲ್ಲಿ 2 ವರ್ಷ ಕಳೆಯುವಂತಾಯ್ತು.

ಭಾಷೆ ಬರದ ಪದ್ಮಾಳನ್ನು ಜನರು ಹುಚ್ಚಿ ಎಂದು ಅರ್ಥೈಸಿಕೊಂಡಿದ್ದರು. ಇದೇ ಕಾರಣಕ್ಕೆ ಶಿಮ್ಲಾದ ಪುನರ್ವಸತಿ ಕೇಂದ್ರಕ್ಕೆ ಸೇರಿಸಿದ್ದರು. ಸಾಮಾನ್ಯವಾಗಿದ್ದರೂ ಪದ್ಮಾ ಎರಡು ವರ್ಷ ಹುಚ್ಚರ ಜೊತೆ ಕಳೆದು ಹುಚ್ಚಿಯಾಗಿದ್ದಳು. ಸದಾ ಅಮ್ಮ ಬೇಕೆಂದು ಅಳ್ತಿದ್ದಳು.

ಎರಡು ವರ್ಷಗಳ ನಂತ್ರ ಪದ್ಮಾಗೆ ಶಿಮ್ಲಾದಲ್ಲಿರುವ ಕಾರ್ಯಕ್ಷಮತೆ ಸಂಘವೊಂದರ ನೆರವು ಸಿಕ್ತು. ಅದ್ರ ಅಧ್ಯಕ್ಷ ಸುನಿಲ್ ಶರ್ಮಾ ಕರ್ನಾಟಕದ ಸ್ವಾಥಿಗೆ ಈ ಬಗ್ಗೆ ತಿಳಿಸಿದ್ರು. ಮಾತುಕತೆ ನಂತ್ರ ಪದ್ಮಾ ಹಾಸನ ಮೂಲದವಳು ಎಂಬ ಸತ್ಯ ಗೊತ್ತಾಯ್ತು.

ಪದ್ಮಾ ಪತಿ ಎರಡನೇ ಮದುವೆಯಾಗಿ ಪದ್ಮಾಳನ್ನು ಮನೆಯಿಂದ ಹೊರ ಹಾಕಿದ್ದ. ತಾಯಿ ಮನೆಗೆ ಹೊರಟಿದ್ದ ಪದ್ಮಾ ಚಂಡೀಗಢ ತಲುಪಿದ್ದಳು. ಅಲ್ಲಿನ ಪೊಲೀಸರು ಆಕೆಯನ್ನು ಶಿಮ್ಲಾಕ್ಕೆ ಕಳುಹಿಸಿದ್ದರು. ಪುನರ್ವಸತಿ ಕೇಂದ್ರಕ್ಕೆ ಕಾರ್ಯಾಗಾರಕ್ಕೆ ಬಂದಾಗ ಪದ್ಮಾ ಬಗ್ಗೆ ಸುನೀಲ್ ಗೆ ತಿಳಿದಿದೆ. ಹಿಮಾಚಲ ಪ್ರದೇಶ ಸರ್ಕಾರ ಪದ್ಮಾಗೆ ನೆರವು ನೀಡುವ ಭರವಸೆ ನೀಡಿದೆ. ಶೀಘ್ರವೇ ಪದ್ಮಾ ಮನೆ ತಲುಪಲಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...