alex Certify
ಕನ್ನಡ ದುನಿಯಾ       Mobile App
       

Kannada Duniya

ಕೇಜ್ರಿವಾಲ್ ಬಣ್ಣ ಬಯಲಿಗೆಳೆದ ಕಪಿಲ್ ಮಿಶ್ರಾ

kapil-mi-del

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಮಾಜಿ ಸಚಿವ ಕಪಿಲ್ ಮಿಶ್ರಾ ಮತ್ತೆ ವಾಗ್ದಾಳಿ ಮಾಡಿದ್ದಾರೆ.

ಆಪ್ ನಿಂದ ಉಚ್ಛಾಟಿತರಾಗಿರುವ ಕಪಿಲ್ ಮಿಶ್ರಾ ಕೆಲವು ದಿನಗಳಿಂದ ಕೇಜ್ರಿವಾಲ್ ವಿರುದ್ಧ ಸಮರ ಸಾರಿದ್ದು, ಭಾನುವಾರ ಮತ್ತೊಂದು ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.

ಬ್ಲಾಕ್ ಅಂಡ್ ವೈಟ್ ದಂಧೆಯಲ್ಲಿ ತೊಡಗಿರುವ ಕೇಜ್ರಿವಾಲ್, ಹವಾಲಾ ಮೂಲಕ ಪಾರ್ಟಿ ಫಂಡ್ ಸಂಗ್ರಹಿಸಿದ್ದಾರೆ. ದೇಣಿಗೆ ಸಂಗ್ರಹಿಸುವ ನೆಪದಲ್ಲಿ ನಕಲಿ ಕಂಪನಿಗಳಿಂದ ಬ್ಲಾಕ್ ಮನಿ ಪಡೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಅಲ್ಲದೇ, ಚುನಾವಣಾ ಆಯೋಗಕ್ಕೆ ಸುಳ್ಳು ಮಾಹಿತಿ ನೀಡಲಾಗಿದೆ. 461 ನಕಲಿ ಕಂಪನಿಗಳಿಂದ ದೇಣಿಗೆ ಪಡೆದಿರುವಂತೆ ತೋರಿಸಲಾಗಿದೆ. ಒಂದೇ ದಿನ, ಒಂದೇ ಸಮಯದಲ್ಲಿ ಕಂಪನಿಗಳಿಂದ ದೇಣಿಗೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಬ್ಯಾಂಕ್ ಖಾತೆಯಲ್ಲಿ 45.7 ಕೋಟಿ ರೂ. ಇದ್ದರೂ, ಲೆಕ್ಕಪತ್ರದಲ್ಲಿ ಕೇವಲ 9 ಕೋಟಿ ತೋರಿಸಲಾಗಿದೆ ಎಂದು ಹೇಳಿದ್ದಾರೆ.

ಆಪ್ ನಾಯಕರು ವಿದೇಶ ಪ್ರವಾಸಕ್ಕೆ ಹೋಗಿ ಏನೆಲ್ಲಾ ಮಾಡಿದ್ದಾರೆ. ದೇಣಿಗೆ ಹೆಸರಲ್ಲಿ ಬ್ಲಾಕ್ ಮನಿ ಸಂಗ್ರಹಿಸಿದ್ದಾರೆ. ಇದೆಲ್ಲವನ್ನು ಒಳಗೊಂಡ ದಾಖಲೆಗಳನ್ನು ನಾಳೆ ಸಿ.ಬಿ.ಐ.ಗೆ ಸಲ್ಲಿಸುವುದಾಗಿ ಕಪಿಲ್ ಮಿಶ್ರಾ ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...