alex Certify
ಕನ್ನಡ ದುನಿಯಾ       Mobile App
       

Kannada Duniya

ಸರ್ಕಾರಿ ಹಾಸ್ಟೆಲ್ ಬಾಲಕರಿಗೆ ಬಾಣಸಿಗನಿಂದ್ಲೇ ಲೈಂಗಿಕ ಕಿರುಕುಳ

ಕನ್ಯಾಕುಮಾರಿಯಲ್ಲಿರುವ ಆದಿದ್ರಾವಿಡ ಸರ್ಕಾರಿ ಹಾಸ್ಟೆಲ್ ನ ಬಾಣಸಿಗ ಅಲ್ಲಿರುವ ವಿದ್ಯಾರ್ಥಿಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಒಟ್ಟು 21 ಗಂಡು ಮಕ್ಕಳಿಗೆ ಆತ ಲೈಂಗಿಕ ಕಿರುಕುಳ ನೀಡಿದ್ದು, ಅವರಲ್ಲಿ 9 ಮಂದಿ ದೂರು ದಾಖಲಿಸಿದ್ದಾರೆ.

ವಿಷಯ ಬಾಯ್ಬಿಟ್ರೆ ಕೊಲೆ ಮಾಡುವುದಾಗಿಯೂ ವಿಶ್ವಾಂಬರನ್ ಬೆದರಿಸಿದ್ದ. ರಾತ್ರಿ ಕುಡಿದು ಬರುತ್ತಿದ್ದ ವಿಶ್ವಾಂಬರನ್ 8-13 ವರ್ಷದೊಳಗಿನ ಬಾಲಕರನ್ನು ಓರಲ್ ಸೆಕ್ಸ್ ಗೆ ಒತ್ತಾಯಿಸುತ್ತಿದ್ದ. ಅವರ ಜೊತೆಗೆ ಅಸಭ್ಯವಾಗಿ ಮಾತನಾಡುತ್ತಿದ್ದ.

ಅಷ್ಟೇ ಅಲ್ಲ ನಗ್ನವಾಗಿ ಅಶ್ಲೀಲ ಹಾಡುಗಳಿಗೆ ನರ್ತಿಸುತ್ತಿದ್ದ. ಹಾಸ್ಟೆಲ್ ನ ಹಿರಿಯ ವಿದ್ಯಾರ್ಥಿಗಳು ಮೊದಲ ಮಹಡಿಯಲ್ಲಿರುತ್ತಿದ್ರು. ನೆಲ ಮಹಡಿಯಲ್ಲಿದ್ದ ಬಾಲಕರನ್ನೇ ವಿಶ್ವಾಂಬರನ್ ಟಾರ್ಗೆಟ್ ಮಾಡಿದ್ದ. ಅವರ ಪುಸ್ತಕ, ನೋಟ್ ಬುಕ್ ಗಳನ್ನೆಲ್ಲ ಮಾರಿ ಆ ಹಣದಲ್ಲಿ ಮದ್ಯ ಕುಡಿಯುತ್ತಿದ್ದ.

ಪುಸ್ತಕ ಮತ್ತು ನೋಟ್ ಬುಕ್ ಎಲ್ಲಿ ಅಂತಾ ಶಿಕ್ಷಕರು ಕೇಳಿದಾಗ ವಿಶ್ವಾಂಬರನ್ ನ ಕೃತ್ಯಗಳ ಬಗ್ಗೆ ಬಾಲಕರು ಬಾಯ್ಬಿಟ್ಟಿದ್ದಾರೆ. ಕೊನೆಗೆ ಶಾಲೆಯ ಮುಖ್ಯಶಿಕ್ಷಕರು ಬಾಣಸಿಗನಿಗೆ ವಾರ್ನಿಂಗ್ ನೀಡಿದ್ದರು. ಇದರಿಂದ ಸಿಟ್ಟಿಗೆದ್ದ ಆತ ಹಾಸ್ಟೆಲ್ ವಿದ್ಯಾರ್ಥಿಗಳ ಮೇಲೆ ಹಲ್ಲೆ ಕೂಡ ಮಾಡಿದ್ದ. ಆತನನ್ನು ಈಗಾಗ್ಲೇ ಪೊಲೀಸರು ಬಂಧಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ಚುನಾವಣಾ ಗಿಮಿಕ್...?

    View Results

    Loading ... Loading ...