alex Certify
ಕನ್ನಡ ದುನಿಯಾ       Mobile App
       

Kannada Duniya

ಶಿವ ಭಕ್ತರ ಕೋಪಕ್ಕೆ ಕಾರು ಬಲಿ: ನೋಡ್ತಾ ನಿಂತ ಪೊಲೀಸ್

ಉತ್ತರ ಭಾರತದಲ್ಲಿ ಶ್ರಾವಣ ಮಾಸದ ಸಂಭ್ರಮ ಮನೆ ಮಾಡಿದೆ. ಶಿವನ ಆರಾಧನೆಯಲ್ಲಿ ಭಕ್ತರು ನಿರತರಾಗಿದ್ದಾರೆ. ಶ್ರಾವಣ ಮಾಸದಲ್ಲಿ ಶಿವನ ಕೃಪೆಗೆ ಪಾತ್ರರಾಗಲು ಭಕ್ತರು ಶಾಂತವಾಗಿ ಪೂಜೆ, ಆರಾಧನೆಯಲ್ಲಿ ತೊಡಗ್ತಾರೆಂಬ ನಂಬಿಕೆಯಿದೆ. ಆದ್ರೆ ದೆಹಲಿಯಲ್ಲಿ ನಡೆದ ಘಟನೆಯೊಂದು ಶಿವ ಭಕ್ತರ ಇನ್ನೊಂದು ಮುಖವನ್ನು ತೋರಿಸಿದೆ.

ದೆಹಲಿಯ ಮೋತಿ ನಗರ ಮೆಟ್ರೋ ನಿಲ್ದಾಣದ ಬಳಿ ರಸ್ತೆಯಲ್ಲಿ ಶಿವ ಭಕ್ತರು ಹೊರಟಿದ್ದರು. ಈ ವೇಳೆ ಕಾರೊಂದು ಭಕ್ತನೊಬ್ಬನಿಗೆ ತಾಗಿದೆ. ಇದ್ರಿಂದ ಕೋಪಗೊಂಡ ಶಿವ ಭಕ್ತರು ತಾಂಡವ ರೂಪ ತಾಳಿದ್ದಾರೆ. ಕಾರಿಗೆ ಕೋಲಿನಿಂದ ಹೊಡೆಯಲು ಶುರು ಮಾಡಿದ್ದಾರೆ. ಕಾರಿನಲ್ಲಿದ್ದ ಚಾಲಕ ಬಚಾವ್ ಆಗಿದ್ದಾನೆ. ಮನಸ್ಸಿಗೆ ಬಂದಂತೆ ಕಾರಿಗೆ ಹೊಡೆದ ಭಕ್ತರು ಗ್ಲಾಸ್ ಪುಡಿ ಪುಡಿ ಮಾಡಿದ್ದಾರೆ.

ಆಶ್ಚರ್ಯವೆಂದ್ರೆ ಘಟನೆ ನಡೆಯುವಾಗ ದೆಹಲಿ ಪೊಲೀಸರು ಅಲ್ಲಿಯೇ ಇದ್ರು. ಚಾಲಕ ವಿನಂತಿ ಮಾಡಿಕೊಂಡ್ರೂ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಪರಿಸ್ಥಿತಿ ನಿಯಂತ್ರಣಕ್ಕೆ ಮುಂದಾಗಲಿಲ್ಲ. ಭಕ್ತರು ಕಾರಿಗೆ ಹೊಡೆಯುತ್ತಿದ್ದರೆ ಪೊಲೀಸರು ನೋಡ್ತಾ ನಿಂತಿದ್ದರು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...