alex Certify
ಕನ್ನಡ ದುನಿಯಾ       Mobile App
       

Kannada Duniya

ಸಂಚಾರಿ ನಿಯಮ ಬ್ರೇಕ್ ಮಾಡಿದ್ರೆ ಶರಬತ್ತು ನೀಡ್ತಾರೆ ಪೊಲೀಸ್

ಕಾನ್ಪುರ ಪೊಲೀಸರು ಟ್ರಾಫಿಕ್  ವ್ಯವಸ್ಥೆ ಸರಿಪಡಿಸಲು ವಿನೂತನ ಕಾರ್ಯಕ್ಕೆ ಕೈ ಹಾಕಿದ್ದಾರೆ. ಎಸ್ ಎಸ್ ಪಿ ಆದೇಶದ ಮೇರೆಗೆ ಟ್ರಾಫಿಕ್ ನಿಯಮ ಮುರಿದ ವಾಹನ ಸವಾರರಿಗೆ ಟ್ರಾಫಿಕ್ ಪೊಲೀಸ್, ಶರಬತ್ತು ಕುಡಿಸಿ ಶಪಥ ಪಡೆಯುತ್ತಿದ್ದಾರೆ. ಇನ್ಮುಂದೆ ಟ್ರಾಫಿಕ್ ನಿಯಮ ಮುರಿಯುವುದಿಲ್ಲವೆಂದು ಶಪಥ ಪತ್ರಕ್ಕೆ ಸಹಿ ಹಾಕಿಸಿಕೊಳ್ತಿದ್ದಾರೆ.

ನಗರದ ಎಲ್ಲ ಚೌಕಿಗಳಲ್ಲಿ ಟ್ರಾಫಿಕ್ ಪೊಲೀಸರು ಶರಬತ್ತು ನೀಡ್ತಿದ್ದಾರೆ. ಇನ್ನೂ ಒಂದು ವಾರ ಈ ಅಭಿಯಾನ ಜಾರಿಯಲ್ಲಿರಲಿದೆ. ಸಂಚಾರಿ ನಿಯಮ ಮುರಿದ ಬೈಕ್ ಸವಾರನಿಗೆ ಎಸ್ ಎಸ್ ಪಿ ಶರಬತ್ತು ಕುಡಿಸಿ ಈ ಅಭಿಯಾನಕ್ಕೆ ಚಾಲನೆ ನೀಡಿದ್ರು.

ಐಟಿಎಂಎಸ್ ನಿಯಮದಂತೆ ಸಂಚಾರಿ ನಿಯಮ ಪಾಲನೆ ಮಾಡದವರ ವಿರುದ್ಧ ಸೂಕ್ತ ಜಾರಿಯಾಗಲಿದೆ. ಇದ್ರ ಜೊತೆಯಲ್ಲಿಯೇ ಶರಬತ್ತು ಕುಡಿಸುವ ಅನನ್ಯ ಯೋಜನೆ ಇನ್ನೊಂದು ವಾರ ಚಾಲ್ತಿಯಲ್ಲಿರಲಿದೆ. ಸಂಚಾರಿ ನಿಯಮ ಪಾಲಿಸದೆ ಹೋದಲ್ಲಿ ಯಾವೆಲ್ಲ ತೊಂದರೆ ಎದುರಿಸಬೇಕಾಗುತ್ತದೆ ಎಂಬ ಬಗ್ಗೆಯೂ ಜನರಿಗೆ ಮನವರಿಕೆ ಮಾಡಿಕೊಡಲಾಗುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...