alex Certify
ಕನ್ನಡ ದುನಿಯಾ       Mobile App
       

Kannada Duniya

ವಾಯು ಮಾಲಿನ್ಯ ಪಟ್ಟಿಯಲ್ಲಿ ಮುಂದಿದೆ ಭಾರತದ ಈ ನಗರ

ದಿನ ದಿನಕ್ಕೂ ಭಾರತದಲ್ಲಿ ಮಾಲಿನ್ಯ ಪ್ರಮಾಣ ಹೆಚ್ಚಾಗ್ತಿದೆ. ವಿಶ್ವ ಆರೋಗ್ಯ ಸಂಸ್ಥೆ ಬಿಡುಗಡೆ ಮಾಡಿರುವ ವಿಶ್ವದ ಅತ್ಯಂತ ಕಲುಷಿತ ನಗರಗಳ ಪಟ್ಟಿಯಲ್ಲಿ ಭಾರತ ತಲೆತಗ್ಗಿಸುವಂತಾಗಿದೆ. ವಿಶ್ವಸಂಸ್ಥೆ ಕಲುಷಿತ 15 ನಗರಗಳ ಪಟ್ಟಿ ಬಿಡುಗಡೆ ಮಾಡಿದೆ. ಅದ್ರಲ್ಲಿ ಭಾರತದ 14 ನಗರಗಳು ಸ್ಥಾನ ಪಡೆದಿವೆ. ಕಾನ್ಪುರ, ಪಟ್ಟಿಯಲ್ಲಿ ಮೊದಲಿದ್ದರೆ ರಾಷ್ಟ್ರ ರಾಜಧಾನಿ ದೆಹಲಿ ಆರನೇ ಸ್ಥಾನದಲ್ಲಿದೆ.

ಭಾರತದ 14 ನಗರಗಳಲ್ಲಿ ವಾಯುಮಾಲಿನ್ಯ ಮಿತಿಮೀರಿದೆ. ಕಾನ್ಪುರದ ನಂತ್ರ ಫರೀದಾಬಾದ್, ವಾರಣಾಸಿ, ಗಯಾ, ಪಾಟ್ನಾ, ದೆಹಲಿ, ಲಕ್ನೋ, ಆಗ್ರಾ, ಮುಜಾಫರ್ನಗರ್, ಶ್ರೀನಗರ, ಗುಡ್ಗಾಂವ್, ಜೈಪುರ, ಪಟಿಯಾಲಾ ಮತ್ತು ಜೋದ್ಪುರ ಸ್ಥಾನ ಪಡೆದಿದೆ. 2015 ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಬಿಡುಗಡೆ ಮಾಡಿದ್ದ ಪಟ್ಟಿಯಲ್ಲಿ ದೆಹಲಿ ನಾಲ್ಕನೇ ಸ್ಥಾನದಲ್ಲಿತ್ತು. ಈಗ 6ನೇ ಸ್ಥಾನಕ್ಕಿಳಿದಿರುವುದು ಖುಷಿ ವಿಚಾರ.

2010ರಲ್ಲಿ ದೆಹಲಿ ಮೊದಲ ಸ್ಥಾನದಲ್ಲಿದ್ದರೆ ಪೇಶಾವರ್ ಹಾಗೂ ರಾವಲ್ಪಿಂಡಿ ಎರಡು ಮತ್ತು ಮೂರನೇ ಸ್ಥಾನದಲ್ಲಿತ್ತು. 2010ರ ನಂತ್ರ ಸಾಕಷ್ಟು ಬದಲಾವಣೆಗಳಾಗಿವೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಉಜ್ವಲಾ ಯೋಜನೆ ಕೂಡ ಮಾಲಿನ್ಯ ನಿಯಂತ್ರಣಕ್ಕೆ ಕಾರಣ ಎನ್ನಲಾಗ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...