alex Certify
ಕನ್ನಡ ದುನಿಯಾ       Mobile App
       

Kannada Duniya

ಮೋದಿ ಶಿಫಾರಸು ಮಾಡಿದ್ರೂ ಕಾರ್ಪೆಂಟರ್ ಗೆ ಸಿಗಲಿಲ್ಲ ಸಾಲ

ಸಂದೀಪ್ ಸೋನಿ, ಕಾನ್ಪುರದ ಕಾರ್ಪೆಂಟರ್. ಪ್ರಧಾನಿ ಮೋದಿ ಅವರೇ ಶಿಫಾರಸು ಮಾಡಿದ್ದರೂ ಅವರಿಗೆ ಸಾಲ ನೀಡಲು ಬ್ಯಾಂಕ್ ನಿರಾಕರಿಸಿದೆ. ಬರೋಡಾ ಶಾಖೆಯ ಬ್ಯಾಂಕ್ ನಿಂದ ಸಾಲ ಬೇಕೆಂದು 2016ರಲ್ಲಿ ಸಂದೀಪ್ ಪ್ರಧಾನಿಯ ನೆರವು ಕೇಳಿದ್ದರು.

ಆದ್ರೆ ಸಾಲಕ್ಕಾಗಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಬ್ಯಾಂಕ್ ತಿರಸ್ಕರಿಸಿದೆ. ಭಗವದ್ಗೀತೆಯ 7.6 ಶ್ಲೋಕವನ್ನು ಮರದ ಹಲಗೆಯ ಮೇಲೆ ಕೆತ್ತಿದ್ದ ಸಂದೀಪ್, ಅದನ್ನು ಪ್ರಧಾನಿ ಮೋದಿಗೆ ಉಡುಗೊರೆಯಾಗಿ ನೀಡಿದ್ದರು. ಸಂದೀಪ್ ಪ್ರತಿಭೆಯನ್ನು ಗುರುತಿಸಿದ ಮೋದಿ, PMEGP ಯೋಜನೆ ಅಡಿಯಲ್ಲಿ ಸಂದೀಪ್ ಗೆ ಸಾಲ ನೀಡುವಂತೆ ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸಿದ್ದರು.

ಆದ್ರೆ ಬ್ಯಾಂಕ್ ಸಾಲ ನೀಡಲು ಒಪ್ಪದೇ ಇದ್ದಿದ್ರಿಂದ ತಮ್ಮ ಉದ್ಯಮಕ್ಕೆ ಸಮಸ್ಯೆಯಾಗ್ತಿದೆ ಅಂತಾ ಸಂದೀಪ್ ಮೋದಿಗೆ ಪತ್ರ ಬರೆದಿದ್ದಾರೆ. 25 ಲಕ್ಷ ಸಾಲ ಬೇಕೆಂದು ಸಂದೀಪ್ ಕೇಳಿದ್ದರು. ಆದ್ರೆ ಬ್ಯಾಂಕ್ ಆಫ್ ಬರೋಡಾ ಕೇವಲ 10 ಲಕ್ಷ ರೂಪಾಯಿ ನೀಡಿದೆಯಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...