alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್ ! ನನ್ನ ಖಾಸಗಿ ಫೋಟೋ ಬಹಿರಂಗವಾಗುತ್ತಿದೆ ಅಂತಿದ್ದಾರೆ ಕಂಗನಾ

kangana-kkghಬಾಲಿವುಡ್ ನ ಖ್ಯಾತ ನಟ- ನಟಿಯರಾದ ಹೃತಿಕ್ ರೋಷನ್ ಹಾಗೂ ಕಂಗನಾ ರನಾವತ್ ನಡುವಿನ ವೈಯಕ್ತಿಕ ಕದನ ಮತ್ತಷ್ಟು ತಾರಕಕ್ಕೇರಿದೆ. ಹೃತಿಕ್ ರೋಷನ್ ಜೊತೆ ಅತ್ಮೀಯವಾಗಿದ್ದ ಸಂದರ್ಭದಲ್ಲಿ ತೆಗೆದ ತಮ್ಮ ಖಾಸಗಿ ಫೋಟೋ ಹಾಗೂ ವಿಡಿಯೋ ಬಹಿರಂಗವಾಗುವ ಸಾಧ್ಯತೆಯಿದ್ದು, ಅವರನ್ನು ಕೂಡಲೇ ಬಂಧಿಸುವಂತೆ ಕಂಗನಾ ಆಗ್ರಹಿಸಿದ್ದಾರೆ.

ತಮ್ಮ ವಕೀಲ ರಿಜ್ವಾನ್ ಸಿದ್ದೀಖಿ ಮೂಲಕ ಮುಂಬೈ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿರುವ ಕಂಗನಾ ರನಾವತ್, ಹೃತಿಕ್ ರೋಷನ್ ಜೊತೆ ತಾವು ಅತ್ಮೀಯರಾಗಿದ್ದ ಸಂದರ್ಭದಲ್ಲಿ ತೆಗೆದಿರುವ ಖಾಸಗಿ ಫೋಟೋ ಹಾಗೂ ವಿಡಿಯೋಗಳನ್ನು ಮಾಧ್ಯಮಗಳಿಗೆ ಹೃತಿಕ್ ನೀಡುತ್ತಿದ್ದಾರೆ. ಕೂಡಲೇ ಅವರನ್ನು ಬಂಧಿಸಿ ವಿಚಾರಣೆ ನಡೆಸಿ ಎಂದು ಮನವಿ ಮಾಡಿದ್ದಾರೆ.

ಈ ಮಧ್ಯೆ ಕಂಗನಾರ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿದ್ದ ಮುಂಬೈ ಪೊಲೀಸರು, ತನಿಖೆಗೆ ಅವರು ಯಾವುದೇ ಸಹಕಾರ ನೀಡದ ಹಿನ್ನಲೆಯಲ್ಲಿ ಪ್ರಕರಣವನ್ನು ಕ್ಲೋಸ್ ಮಾಡಲು ಮುಂದಾಗಿದ್ದಾರೆಂದು ಹೇಳಲಾಗಿದೆ. ಬಾಲಿವುಡ್ ನಲ್ಲಿ ಲವ್, ಬ್ರೇಕ್ ಅಪ್ ನಂತಹ ಎಷ್ಟೋ ಪ್ರಕರಣಗಳು ಈ ಹಿಂದಿನಿಂದಲೂ ನಡೆದುಕೊಂಡು ಬಂದಿದ್ದು, ಅದ್ಯಾವುದೂ ಹೆಚ್ಚು ಸುದ್ದಿಯಾಗದ ಮಧ್ಯೆ ಈ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿರುವುದು ಬಾಲಿವುಡ್ ಅಂಗಳದಲ್ಲಿ ಅಚ್ಚರಿಯನ್ನುಂಟು ಮಾಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...