alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್ ! 50 ಕ್ಕೂ ಅಧಿಕ ನಾಯಿಗಳನ್ನು ಜೀವಂತ ಸುಟ್ಟ ಸಹೋದರರು

stray dogs 34677ತಮ್ಮ ಮೇಕೆಗಳ ಮೇಲೆ ಬೀದಿ ನಾಯಿಗಳು ದಾಳಿ ಮಾಡಿದವೆಂಬ ಕಾರಣಕ್ಕೆ ಸಿಟ್ಟಿಗೆದ್ದ ಸಹೋದರರಿಬ್ಬರು 50 ಕ್ಕೂ ಅಧಿಕ ನಾಯಿಗಳ ಮೇಲೆ ಸೀಮೆ ಎಣ್ಣೆ ಸುರಿದು ಜೀವಂತವಾಗಿ ಸುಟ್ಟಿರುವ ಆಘಾತಕಾರಿ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ಕಾಂಚೀಪುರಂ ಜಿಲ್ಲೆಯ ಕೀಜಮೂರ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮುತ್ತು ಹಾಗೂ ಮುರುಗದಾಸ್ ಎಂಬ ಸಹೋದರರು, ಈ ಬೀದಿ ನಾಯಿಗಳು ತಾವು ಸಾಕಿದ್ದ ಮೇಕೆಗಳ ಮೇಲೆ ದಾಳಿ ಮಾಡಿದವೆಂಬ ಕಾರಣಕ್ಕೆ ಈ ಅಮಾನವೀಯ ಕೃತ್ಯವೆಸಗಿದ್ದಾರೆ.

ಗ್ರಾಮದಲ್ಲಿ ಸುಮಾರು 100 ನಾಯಿಗಳಿದ್ದವೆಂದು ಹೇಳಲಾಗಿದ್ದು, ಈಗ ಅವುಗಳ ಸಂಖ್ಯೆ 15 ಕ್ಕೆ ಇಳಿದಿದೆ. ಕೆಲ ನಾಯಿಗಳಿಗೆ ವಿಷವುಣಿಸಿ ಹತ್ಯೆ ಮಾಡಿದ್ದರೆ 50 ಕ್ಕೂ ಅಧಿಕ ನಾಯಿಗಳನ್ನು ಜೀವಂತವಾಗಿ ದಹಿಸಲಾಗಿದೆ. ಪ್ರಾಣಿ ದಯಾ ಸಂಘಟನೆಯ ಅಶ್ವಥ್ ಎಂಬವರು ಈ ಕುರಿತು ಮೆಲಮರ್ವತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...