alex Certify
ಕನ್ನಡ ದುನಿಯಾ       Mobile App
       

Kannada Duniya

ಕಮಲಾ ಮಿಲ್ಸ್ ದುರಂತ: ಪಬ್ ಮಾಲೀಕನ ಪತ್ನಿ ಬಂಧನ ಸಾಧ್ಯತೆ….

ಮುಂಬೈನ ಕಮಲಾ ಮಿಲ್ಸ್ ಅಗ್ನಿ ಅವಘಡ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ. ಬುಧವಾರ ರಾತ್ರಿ ಒನ್ ಅಬೋವ್ ಪಬ್ ಮಾಲೀಕ ಕೃಪೇಶ್ ಹಾಗೂ ಜಿಗರ್ ಸಾಂಘ್ವಿಯನ್ನು ಬಂಧಿಸಿದ್ದಾರೆ.

ಮಾಹಿತಿ ಪ್ರಕಾರ, ಮೋಜೋಸ್ ಬಿಸ್ಚ್ರೋ ಪಬ್ ಮಾಲೀಕನ ಪತ್ನಿ ಪ್ರತಿನಾ ತುಲಿಯನ್ನು ಬಂಧಿಸುವ ಸಾಧ್ಯತೆಯಿದೆ. ಪ್ರತಿನಾ ತುಲಿ ಘಟನೆಯಲ್ಲಿ ಭಾಗಿಯಾಗಿದ್ದ ಆರೋಪಿಗಳು ತಪ್ಪಿಸಿಕೊಳ್ಳಲು ಸಹಾಯ ಮಾಡಿದ್ದಳು ಎನ್ನಲಾಗಿದೆ.

ಡಿಸೆಂಬರ್ 29ರಂದು ಅಗ್ನಿ ಅವಘಡ ಸಂಭವಿಸುತ್ತಿದ್ದಂತೆ ಪಬ್ ಮಾಲೀಕರು ನಾಪತ್ತೆಯಾಗಿದ್ದರು. ಕಾರ್ಯಾಚರಣೆ ಕೈಗೊಂಡಿದ್ದ ಪೊಲೀಸರು ಕೆಲ ದಿನಗಳ ಹಿಂದಷ್ಟೇ  ಮೋಜೋಸ್ ಬಿಸ್ಚ್ರೋ ಪಬ್ ಮಾಲೀಕನನ್ನು ಬಂಧಿಸಿದ್ದರು. ಆದ್ರೆ ಒನ್ ಅಬೋವ್ ಮಾಲೀಕರು ತಲೆ ಮರೆಸಿಕೊಂಡಿದ್ದರು. ಅವರ ಬಗ್ಗೆ ಮಾಹಿತಿ ನೀಡಿದ್ರೆ 1 ಲಕ್ಷ ರೂಪಾಯಿ ನೀಡುವುದಾಗಿ ಪೊಲೀಸರು ಘೋಷಣೆ ಮಾಡಿದ್ದರು. ಅಲ್ಲದೆ ಪಬ್ ಮಾಲೀಕರಿಗೆ ನೆರವು ನೀಡಿದ್ದ ಸಹ ಮಾಲೀಕನೊಬ್ಬನನ್ನು ವಶಕ್ಕೆ ಪಡೆದಿದ್ದರು.

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...