alex Certify
ಕನ್ನಡ ದುನಿಯಾ       Mobile App
       

Kannada Duniya

ಕಮಲ್ ಹಾಸನ್ ರ ಹೊಸ ರಾಜಕೀಯ ಪಕ್ಷಕ್ಕೆ ಇಂದು ಚಾಲನೆ

ನಟ ಕಮಲ್ ಹಾಸನ್ ಇಂದು ಅಧಿಕೃತವಾಗಿ ರಾಜಕೀಯಕ್ಕೆ ಎಂಟ್ರಿ ಕೊಡ್ತಿದ್ದಾರೆ. ತಮ್ಮ ಹೊಸ ಪಕ್ಷವನ್ನು ಘೋಷಣೆ ಮಾಡಲಿದ್ದಾರೆ. ಈ ರಾಜಕೀಯ ಪಯಣದಲ್ಲಿ ತಮಗೆ ಸಾಥ್ ಕೊಡ್ತಿರೋ ದಿಗ್ಗಜರ ಹೆಸರನ್ನು ಕೂಡ ಬಹಿರಂಗಪಡಿಸುವ ಸಾಧ್ಯತೆ ಇದೆ.

ಹೊಸ ಪಕ್ಷ ಘೋಷಣೆಗೂ ಮುನ್ನ ಕಮಲ್ ಹಾಸನ್, ರಾಮೇಶ್ವರಂನಲ್ಲಿರುವ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ನಿವಾಸಕ್ಕೆ ಭೇಟಿ ನೀಡಿದ್ರು. ಇಂದು ಕಲಾಂ ನಿವಾಸದಿಂದ ರೋಡ್ ಶೋ ನಡೆಸಿ, ಜನರನ್ನುದ್ದೇಶಿಸಿ ಕಮಲ್ ಹಾಸನ್ ಮಾತನಾಡುವ ಸಾಧ್ಯತೆ ಇದೆ.

ತಮ್ಮ ಹೊಸ ಪಕ್ಷದ ಹೆಸರು ಮತ್ತು ಚಿಹ್ನೆಯನ್ನು ಬಿಡುಗಡೆ ಮಾಡಲಿದ್ದಾರೆ. ಈ ಸಮಾರಂಭಕ್ಕೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಪಿನರಾಯಿ ವಿಜಯನ್ ಹಾಗೂ ನಿತೀಶ್ ಕುಮಾರ್ ರನ್ನು ಕಮಲ್ ಹಾಸನ್ ಆಹ್ವಾನಿಸಿದ್ದಾರೆ. ಈ ಸುಸಂದರ್ಭವನ್ನು ರಾಜಕೀಯದ ಹೊಸ ಯುಗ ಎಂದೇ ಅವರು ಬಣ್ಣಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...