alex Certify
ಕನ್ನಡ ದುನಿಯಾ       Mobile App
       

Kannada Duniya

ಕಾಳಿ ಯಜ್ಞಕ್ಕೆ ಭಕ್ತರ ರಕ್ತ ಕೇಳಿದ ದೇವಾಲಯ ಆಡಳಿತ ಮಂಡಳಿ

ಕೇರಳದ ತಿರುವನಂತಪುರಂನಲ್ಲಿರೋ ಭದ್ರಕಾಳಿ ದೇವಾಲಯದ ಆಡಳಿತ ಮಂಡಳಿ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಸಚಿವ ಕಡಕಂಪಳ್ಳಿ ಸುರೇಂದ್ರನ್ ಹೇಳ್ತಿದ್ದಾರೆ. ಇದಕ್ಕೆ ಕಾರಣ ವಿವಾದಿತ ಕಾಳಿ ಪೂಜೆ. ಮಹಾಖೋರಾ ಕಾಳಿ ಯಜ್ಞಕ್ಕೆ ದೇವಾಲಯ ಆಡಳಿತ ಮಂಡಳಿ ಭಕ್ತರ ರಕ್ತ ಕೇಳಿದೆಯಂತೆ.

ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗಿತ್ತು. ಮಾರ್ಚ್ 12 ರಿಂದ 23ರವರೆಗೆ ಶ್ರೀ ವಿದ್ವರಿ ವಿದ್ಯಾನಾಥ ದೇವಾಲಯದಲ್ಲಿ ಕಾಳಿ ಯಜ್ಞ ನಡೆಯಲಿದೆ. ನೂರಾರು ಭಕ್ತರು ಈ ಯಜ್ಞದಲ್ಲಿ ಪಾಲ್ಗೊಳ್ಳಬಹುದು. ಆದ್ರೆ ಡಿಸ್ಪೋಸೇಬಲ್ ಸಿರೆಂಜ್ ಮೂಲಕ ತಮ್ಮ ರಕ್ತವನ್ನು ದಾನ ಮಾಡಬೇಕೆಂದು ಹೇಳಲಾಗಿತ್ತು.

ಈ ರೀತಿ ಮಾಡಿದ್ರೆ ರೋಗಗಳೆಲ್ಲ ಗುಣವಾಗುತ್ತೆ ಅನ್ನೋ ನಂಬಿಕೆ ಇದೆ. ಈ ಹಿಂದೆ ಮೂರು ಬಾರಿ ಈ ರೀತಿ ಭಕ್ತರ ರಕ್ತ ಪಡೆಯಲಾಗಿದೆಯಂತೆ. ಪ್ರತಿ ಭಕ್ತರಿಂದ್ಲೂ ಕೆಲವೇ ಹನಿಗಳಷ್ಟು ರಕ್ತ ಪಡೆಯಲಾಗುವುದು. ಲ್ಯಾಬ್ ಟೆಕ್ನಿಶಿಯನ್ ಸ್ಥಳದಲ್ಲಿರ್ತಾರೆ. ಭಕ್ತರಿಂದ ಪಡೆದ ರಕ್ತವನ್ನು ಯಜ್ಞಕ್ಕೆ ಸಿಂಪಡಿಸಲಾಗುವುದು ಅಂತಾ ದೇವಾಲಯದ ಅಧಿಕಾರಿ ಮಣಿಕಂಠನ್ ಹೇಳಿದ್ದರು.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...