alex Certify
ಕನ್ನಡ ದುನಿಯಾ       Mobile App
       

Kannada Duniya

34 ಕಿಲೋಮೀಟರ್ ಪಾದಯಾತ್ರೆ ಮಾಡಿದ ರಾಹುಲ್

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆಗಸ್ಟ್ ಅಂತ್ಯದಲ್ಲಿ ಆರಂಭಿಸಿದಂತಾ ಕೈಲಾಸ ಮಾನಸ ಸರೋವರ ಯಾತ್ರೆ ಭರದಿಂದ ಸಾಗುತ್ತಿದೆ. ಪ್ರತಿ ದಿನವೂ ಅವರು ತಮ್ಮ ಯಾತ್ರೆಗೆ ಸಂಬಂಧಿಸಿದ ಫೋಟೊ ಮತ್ತು ವಿಡಿಯೋಗಳನ್ನ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡುತ್ತಾ ಗಮನ ಸೆಳೆಯುತ್ತಿದ್ದಾರೆ.

ನಿನ್ನೆಯಷ್ಟೇ ಶಿವ ಈಸ್ ಯೂನಿವರ್ಸ್ ಎಂಬ ಟ್ವೀಟ್ ಮಾಡಿ ರಾಹುಲ್ ಗಾಂಧಿ ತಮ್ಮ ಕೈಲಾಸ ಯಾತ್ರೆಯ ಹಲವು ವಿಡಿಯೋಗಳನ್ನ ಪೋಸ್ಟ್ ಮಾಡಿದ್ದರು. ಕೈಲಾಸ ಪರ್ವತದ ಸೂರ್ಯೋದಯ ಮತ್ತು ಸೂರ್ಯಾಸ್ತಗಳ ವಿಡಿಯೋ ಸೇರಿದಂತೆ ಯಾತ್ರೆಯ ಕುತೂಹಲಕಾರಿ ಮಾಹಿತಿಯನ್ನ ಟ್ವಿಟ್ಟರ್ ಮೂಲಕ ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಳ್ತಿದ್ದಾರೆ.

ಕೈಲಾಸ ಯಾತ್ರೆಯ ಭಾಗವಾಗಿ ರಾಹುಲ್ ಗಾಂಧಿ 13 ಗಂಟೆಗಳಲ್ಲಿ 34 ಕಿಲೋಮೀಟರ್ ಪಾದಯಾತ್ರೆಯನ್ನು ಮಾಡಿದ್ದಾರೆ. ಬೆಳಗ್ಗೆ 7ರಿಂದ 8 ಗಂಟೆ ಅವಧಿಯಲ್ಲಿ ಕಾಲ್ನಡಿಗೆ ಮೂಲಕವೇ ಟ್ರಕ್ಕಿಂಗ್ ಮಾಡಿ ಆನಂತರ ಕ್ಯಾಂಪ್ ಗೆ ರಾಹುಲ್ ವಾಪಸ್ಸಾಗಿದ್ದಾರೆ. ರಾಹುಲ್ ಗಾಂಧಿಯವರ ಮಾನಸ ಸರೋವರ ಯಾತ್ರೆಯ ವರದಿ ರಾಷ್ಟ್ರೀಯ ಮಾಧ್ಯಮಗಳಲ್ಲಿ ಹೆಚ್ಚು ಸುದ್ದಿಯಾಗ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...