alex Certify
ಕನ್ನಡ ದುನಿಯಾ       Mobile App
       

Kannada Duniya

ದುಬಾರಿ ಹರಕೆ ತೀರಿಸಿದ ತೆಲಂಗಾಣ ಮುಖ್ಯಮಂತ್ರಿ

ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರು ವಿಜಯವಾಡದ ಕನಕದುರ್ಗಾ ದೇವಸ್ಥಾನಕ್ಕೆ ತೆರಳಿ ಬಹುದಿನಗಳಿಂದ ಬಾಕಿ ಉಳಿದಿದ್ದ ಹರಕೆಯೊಂದನ್ನ ತೀರಿಸಿದ್ದಾರೆ.

ಜೂನ್ 28 ರಂದು ಕುಟುಂಬ ಸಮೇತರಾಗಿ ವಿಜಯವಾಡದಲ್ಲಿರೋ ಕನಕದುರ್ಗಾ ಸನ್ನಿಧಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇದೇ ಸಂದರ್ಭದಲ್ಲಿ ವಜ್ರದ ಮೂಗುತಿಯನ್ನ ದೇವಿಗೆ ಅರ್ಪಿಸಿದ್ದಾರೆ.
ನಾಲ್ಕು ವರ್ಷಗಳ ಹಿಂದೆ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರು ದೇವರಲ್ಲಿ ಹರಕೆಯೊಂದನ್ನ ಮಾಡಿಕೊಂಡಿದ್ದರಂತೆ. ತೆಲಂಗಾಣ ರಾಜ್ಯ ರಚನೆ ಆದ ಪಕ್ಷದಲ್ಲಿ ವಜ್ರದ ಮೂಗುತಿಯನ್ನ ನೀಡೋದಕ್ಕೆ ಹರಕೆ ಕಟ್ಟಿದ್ದರಂತೆ. ಆ ಪ್ರಕಾರ ಕೆಸಿಆರ್ ತಮ್ಮ ಹರಕೆಯನ್ನ ತೀರಿಸಿದ್ದಾರೆ.

ತೆಲಂಗಾಣದ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಸಂದರ್ಭದಲ್ಲಿ ದೇವಸ್ಥಾನದ ರಾಜಗೋಪುರದ ಜೀರ್ಣೋದ್ಧಾರ ಕಾರ್ಯವನ್ನ ಕೆಸಿಆರ್ ನೆರವೇರಿಸಿದ್ದರು. ಅಲ್ಲದೇ ಕನಕದುರ್ಗಾಂಬಿಕೆಗೆ ರೇಷ್ಮೆ ಸೀರೆಯನ್ನ ನೀಡಿದ್ದರು. ಈಗ ವಜ್ರದ ಮೂಗುತಿಯನ್ನ ಅರ್ಪಿಸಿ ವರ್ಷಾಂತ್ಯಕ್ಕೆ ನಡೆಯಲಿರೋ ವಿಧಾನಸಭಾ ಚುನಾವಣೆಯಲ್ಲಿ ಯಶಸ್ಸು ನೀಡುವಂತೆ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಕೂಡ ಈ ದೇವಸ್ಥಾನಕ್ಕೆ ಹಲವು ಬಾರಿ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...