alex Certify
ಕನ್ನಡ ದುನಿಯಾ       Mobile App
       

Kannada Duniya

ಜ್ವಾಲಾ ರೂಪದಲ್ಲಿದ್ದಾಳೆ ಜ್ವಾಲಾ ದೇವಿ…!

ಜಗತ್ತಿನಲ್ಲಿರೋ 51 ಶಕ್ತಿಪೀಠಗಳ ಬಗ್ಗೆ ನಿಮಗೆ ಗೊತ್ತೆ ಇದೆ. ಸಾಮಾನ್ಯವಾಗಿ ಶಕ್ತಿಪೀಠಗಳಲ್ಲಿ ದೇವಿಯು ಪಿಂಡಿ ರೂಪದಲ್ಲಿರುತ್ತೆ. ಆದರೆ ಇಲ್ಲಿರೋ ಒಂದು ದೇವಾಲಯದಲ್ಲಿ ದೇವಿಯು ಪರಮ ಪಾವನವಾದ ಜ್ಯೋತಿಯ ರೂಪದಲ್ಲಿರೋದು ವಿಶೇಷ. ಹೌದು…! ಇಲ್ಲಿ ಉರಿಯುವ ಜ್ವಾಲೆ ನೈಸರ್ಗಿಕವಾಗಿ ಉರಿಯುತ್ತೆ. ಆದರೆ ಎಂದಿಗೂ ನಂದಿ ಹೋಗಲ್ಲ.

ಶತಶತಮಾನಗಳಿಂದ ಗರ್ಭಗುಡಿಯಲ್ಲಿ ಜ್ವಾಲೆ ಉರಿಯುತ್ತಿದೆ. ಆದರೆ, ಈ ಜ್ವಾಲೆ ಎಲ್ಲಿಂದ ಬಂತು, ಯಾರು ಹಚ್ಚಿದ್ದಾರೆ ಅನ್ನೋ ಪ್ರಶ್ನೆಗಳಿಗೆ ಇದುವರೆಗೂ ಉತ್ತರ ಸಿಕ್ಕಿಲ್ಲ. ದೀಪದಲ್ಲಿ ಉರಿಯುತ್ತಿರೋ ಜ್ವಾಲೆಯನ್ನು ಇಲ್ಲಿನ ಜನರು ಪೂಜಿಸುತ್ತಾರೆ. ಅಂದಹಾಗೆ ಈ ದೇವಾಲಯ ಇರೋದು, ಹಿಮಾಚಲ ಪ್ರದೇಶದ ಕಂಗ್ರಾ ನಗರದ ಜ್ವಾಲಾ ಅನ್ನೋ ಗ್ರಾಮದಲ್ಲಿ.

ಜ್ವಾಲಾ ದೇವಿ ಸೃಜನಶೀಲತೆ, ಜ್ಞಾನ, ವಿವೇಕ, ಕಲೆ, ಧೈರ್ಯ, ಇವೇ ಮೊದಲಾದ ಜೀವನಾವಶ್ಯಕ ಗುಣಗಳ ಸ೦ಕೇತವಾಗಿದ್ದಾಳೆ. ಇಲ್ಲಿಗೆ ಬರುವ ಜನರಿಗೆ ದೇವಿ ಅವರ ಇಷ್ಟಾರ್ಥಗಳನ್ನ ಸಿದ್ಧಿಸಿಯೇ ತೀರುತ್ತಾಳೆ. ಇಂತಹ ದೈವಿ ಸನ್ನಿಧಿಗೆ ಒಮ್ಮೆಯಾದ್ರು ಭೇಟಿ ನೀಡಬೇಕು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...