alex Certify
ಕನ್ನಡ ದುನಿಯಾ       Mobile App
       

Kannada Duniya

‘ತಾಯಂದಿರ ದಿನ’ದ ಮರುದಿನ ಸಿಕ್ಕಿತ್ತು ಮೃತ ಪುತ್ರಿಯ ಉಡುಗೊರೆ

ಉತ್ತರ ಪ್ರದೇಶದ ಮುಜಫರ್ಪುರದಲ್ಲೊಂದು ಮನ ಕಲಕುವ ಘಟನೆ ನಡೆದಿದೆ. ಯುವತಿಯೊಬ್ಬಳು ಆಕಸ್ಮಿಕವಾಗಿ ಸಾವನ್ನಪ್ಪಿದ್ದು, ಆಕೆ ಸಾವಿಗೀಡಾದ ಮರು ದಿನ ‘ವಿಶ್ವ ತಾಯಂದಿರ ದಿನ’ ವಿದ್ದು ಆ ನಿಮಿತ್ತ ಯುವತಿ, ತನ್ನ ತಾಯಿಗಾಗಿ ಮುಂಚಿತವಾಗಿಯೇ ಬುಕ್ ಮಾಡಿದ್ದ ಕೇಕ್ ಕೊರಿಯರ್ ನಲ್ಲಿ ಬಂದಿದೆ.

24 ವರ್ಷದ ರುಬೀನಾ ಎಂಎಸ್ಸಿ ವ್ಯಾಸಂಗ ಮಾಡುತ್ತಿದ್ದು, ಆಕೆಯ ತಂದೆ ಜಮೀರ್ ಅಹ್ಮದ್ ಹೋಟೆಲ್ ನಡೆಸುತ್ತಿದ್ದಾರೆ. ಎಲ್ಲರಂತೆ ಆರೋಗ್ಯವಾಗಿದ್ದ ರುಬೀನಾ 15 ದಿನಗಳ ಹಿಂದೆ ಇದ್ದಕ್ಕಿದ್ದಂತೆ ಅಸ್ವಸ್ಥಗೊಂಡಿದ್ದಳು.

ಆತಂಕಗೊಂಡ ಕುಟುಂಬ, ಆಕೆಯನ್ನು ವೈದ್ಯರ ಬಳಿ ಕರೆದುಕೊಂಡು ಹೋಗಿದ್ದು, ಹೆದರಬೇಕಾದ ಅಗತ್ಯವಿಲ್ಲವೆಂದು ಹೇಳಿದ್ದ ವೈದ್ಯರು ಚಿಕಿತ್ಸೆ ನೀಡಿ ಕಳುಹಿಸಿದ್ದರು. ಆದರೆ ಸಾವು ಹೇಳಿ ಕೇಳಿ ಬರುವುದಿಲ್ಲ ನೋಡಿ. ನಗುನಗುತ್ತಾ ಇದ್ದ ರುಬೀನಾ ಕುಸಿದು ಬಿದ್ದು ಸಾವನ್ನಪ್ಪಿದ್ದಾಳೆ. ಇದರಿಂದ ಕುಟುಂಬ ತೀವ್ರ ಆಘಾತಕ್ಕೊಳಗಾಗಿದ್ದು, ದುಃಖದ ಮಡುವಿನಲ್ಲೇ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಿದ್ದಾರೆ. ಅದರ ಮರು ದಿನ ‘ವಿಶ್ವ ತಾಯಂದಿರ ದಿನ’ ವಾಗಿದ್ದು, ಕೊರಿಯರ್ ಬಾಯ್ ಮನೆ ಬೆಲ್ ಮಾಡಿದಾಗ ಕುಟುಂಬಸ್ಥರು ಬಾಗಿಲು ತೆರೆದಿದ್ದಾರೆ.

ಈ ವೇಳೆ ಅನಾರೋಗ್ಯದ ಸಂದರ್ಭದಲ್ಲೂ ತನ್ನ ತಾಯಿಗಾಗಿ ರುಬೀನಾ ಬುಕ್ ಮಾಡಿದ್ದ ಕೇಕ್ ಅನ್ನು ಕೊರಿಯರ್ ಬಾಯ್ ನೀಡಿದ್ದಾನೆ. ಇದನ್ನು ನೋಡುತ್ತಿದ್ದಂತೆಯೇ ಮತ್ತೊಮ್ಮೆ ಕುಟುಂಬ ಸದಸ್ಯರ ದುಃಖದ ಕಟ್ಟೆ ಒಡೆದಿದೆ. ಮಗಳನ್ನು ನೆನಪಿಸಿಕೊಂಡಿರುವ ರುಬೀನಾ ತಂದೆ ಜಮೀರ್ ಅಹ್ಮದ್, ಬದುಕಿರುವಾಗ ತಮ್ಮ ಮಗಳು ನನ್ನ ಹುಟ್ಟು ಹಬ್ಬ ಹಾಗೂ ವಿಶ್ವ ತಾಯಂದಿರ ದಿನವನ್ನು ತಪ್ಪದೆ ಆಚರಿಸುತ್ತಿದ್ದಳು. ಸಾವಿಗೀಡಾಗುವ ಮುನ್ನ ತನ್ನ ತಾಯಿಗೆ ಈ ಮೂಲಕ ಶುಭ ಕೋರಿದ್ದಾಳೆ ಎಂದು ಕಣ್ಣೀರಿಟ್ಟಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...