alex Certify
ಕನ್ನಡ ದುನಿಯಾ       Mobile App
       

Kannada Duniya

ತೃತೀಯ ಲಿಂಗಿಗಳ ಸಂಕಷ್ಟಗಳನ್ನು ತೆರೆದಿಟ್ಟಿದೆ ಈ ವರದಿ

ಲಿಂಗ ಪರಿವರ್ತನೆಗೊಳಪಟ್ಟವರು ಅಥವಾ ಸಮಾಜದಲ್ಲಿ ತೃತೀಯ ಲಿಂಗಿಗಳು ಅಂತ ಗುರುತಿಸಲ್ಪಡುವ ಸಮುದಾಯದ ಶೇಕಡಾ 92 ರಷ್ಟು ಮಂದಿ ದೇಶದ ಆರ್ಥಿಕ ಚಟುವಟಿಕೆಯ ಭಾಗವಾಗುವ ಅವಕಾಶದಿಂದ ವಂಚಿತರಾಗಿದ್ದಾರೆ ಅನ್ನೋ ವಿಚಾರ ಈಗ ಬಹಿರಂಗವಾಗಿದೆ. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಅಡಿಯಲ್ಲಿ ಕೇರಳದ ಅಭಿವೃದ್ಧಿ ಪ್ರಾಧಿಕಾರ ನಡೆಸಿದ ಸಮೀಕ್ಷಾ ವರದಿಯಲ್ಲಿ ಈ ವಿಚಾರ ಬಹಿರಂಗವಾಗಿದೆ.

ಅಧ್ಯಯನದ ವರದಿಯ ಪ್ರಕಾರ ದೇಶದಲ್ಲಿ ತೃತೀಯ ಲಿಂಗಿಗಳ ಬದುಕು ತುಂಬಾನೇ ಕಷ್ಟಕರವಾಗಿದೆಯಂತೆ. ಶೇಕಡಾ 57 ರಷ್ಟು ಮಂದಿ ಅನಿವಾರ್ಯವಾಗಿ ಲಿಂಗ ಪರಿವರ್ತನೆ ಚಿಕಿತ್ಸೆಗೆ ಒಳಗಾಗ್ತಾರಂತೆ. ಶೇಕಡಾ 52 ರಷ್ಟು ಮಂದಿ ಶಾಲೆಯಲ್ಲಿ ತಮ್ಮ ಸಹಪಾಠಿಗಳಿಂದ ಟೀಕೆಗೆ ಒಳಗಾಗ್ತಾರಂತೆ. ಶೇಕಡಾ 15 ರಷ್ಟು ಮಂದಿಗೆ ಶಿಕ್ಷಕರು ಶಿಕ್ಷಣ ಮುಂದುವರೆಸದೆ ಇರೋದಕ್ಕೆ ಕಾರಣರಾಗ್ತಾರಂತೆ . ಕೇವಲ ಶೇಕಡಾ 2 ರಷ್ಟು ಲಿಂಗಪರಿವರ್ತನೆಗೊಂಡವರು ಮಾತ್ರ ಕುಟುಂಬದೊಂದಿಗೆ ಜೀವನ ಮಾಡ್ತಿದ್ದಾರೆ ಅಂತ ಅಧ್ಯಯನದ ವರದಿ ತಿಳಿಸಿದೆ.

ಮನೆ ದೊರಕದೆ ಇರುವ, ಸಮಾಜದಿಂದ ಟೀಕೆ ಟಿಪ್ಪಣಿಗಳನ್ನು ಕೇಳಬೇಕಾದ, ವೈವಾಹಿಕ ಹಕ್ಕಿನಿಂದ ವಂಚಿತರಾದಂತ ಹಲವು ಸಾಮಾಜಿಕ ಸಮಸ್ಯೆಗಳನ್ನ ತೃತೀಯ ಲಿಂಗಿಗಳು ಅನುಭವಿಸುತ್ತಿದ್ದಾರಂತೆ. ಈ ಬಗ್ಗೆ ಸುದೀರ್ಘವಾಗಿ ಸರಾಸರಿ ಮತ್ತು ಅಂಕಿಅಂಶಗಳ ವಿವರದ ಮೇಲೆ ಅಧ್ಯಯನದ ವರದಿ ಬೆಳಕು ಚೆಲ್ಲಿದೆ. ಭಾರತದಲ್ಲಿ ತಮಿಳುನಾಡು ತೃತೀಯ ಲಿಂಗಿಗಳಿಗೆ ಸಾಮಾಜಿಕ ಮನ್ನಣೆ ಸಿಗುವಂತಾ ಕೆಲ ಕಾರ್ಯಕ್ರಮಗಳನ್ನ ಆಯೋಜನೆ ಮಾಡೋದ್ರಲ್ಲಿ ಮುಂಚೂಣಿಯಲ್ಲಿದೆಯಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...