alex Certify
ಕನ್ನಡ ದುನಿಯಾ       Mobile App
       

Kannada Duniya

ವಿಡಿಯೋ: ಮನೆಯೊಳಗೆ ನುಗ್ಗಿ ಅಕ್ಕಿ ತಿಂದ ಆನೆ…!

ಕಾಡಿನಿಂದ ಆಹಾರ ಅರಸಿಕೊಂಡು ನಾಡಿಗೆ ಕಾಡು ಪ್ರಾಣಿಗಳು ಬರುವುದು ಸಹಜ. ಇದರಲ್ಲಿ ಕಾಡಾನೆಗಳು ಬಂದರೂ ಹೊಲದಲ್ಲಿಯೋ ಅಥವಾ ಬಣವೆಯಲ್ಲಿಯೋ ಶೇಖರಿಸಿರುವ ಹುಲ್ಲನ್ನು ಸೇವಿಸುವುದು ಇತ್ತೀಚಿನ ದಿನದಲ್ಲಿ ಸಾಮಾನ್ಯ. ಆದರೆ ಇದೆಲ್ಲವನ್ನು ಬಿಟ್ಟು ಆನೆಯೊಂದು ಮಾಡಿರುವ ಕೆಲಸ ಇದೀಗ ವೈರಲ್ ಆಗಿದೆ.

ಹೌದು, ಇಷ್ಟು ದಿನ ಹೊಲಗಳಿಗೆ ಬರುತ್ತಿದ್ದ ಆನೆಗಳು ಇದೀಗ ಮನೆಗೂ ಬರಲು ಶುರು ಹಚ್ಚಿವೆ. ಕೊಯಂಬತ್ತೂರಿನ ಥಡಗಾಂ ಎಂಬಲ್ಲಿ ಆನೆಯೊಂದು ಮನೆಯೊಂದಕ್ಕೆ ನುಗ್ಗಿ ಅಕ್ಕಿ ಹಾಗೂ ಆಹಾರ ಧಾನ್ಯ ಹುಡುಕುತ್ತಿರುವ ದೃಶ್ಯ ವೈರಲ್ ಆಗಿದೆ. ಕುಟುಂಬ ಸದಸ್ಯರೆಲ್ಲ ನಿದ್ರೆಯಲ್ಲಿದ್ದಾಗ ಏಕಾಏಕಿ ನುಗ್ಗಿರುವ ಈ ಆನೆ, ಮನೆಯಲ್ಲಿದ್ದ ಆಹಾರ ಸಾಮಗ್ರಿಯನ್ನು ಹುಡುಕಿದೆ.‌ ಆನೆಯ ಈ‌ ಕೆಲಸದಿಂದ ಉಂಟಾದ ಶಬ್ದದಿಂದ ಎಚ್ಚೆತ್ತ ಮನೆಯವರು ಆನೆಯನ್ನು ನೋಡಿ ಗಾಬರಿಯಾಗಿದ್ದಾರೆ.

33 ಸೆಕೆಂಡ್‌ ನ ಈ ವಿಡಿಯೋದಲ್ಲಿ ಆನೆ, ತನ್ನ ಸೊಂಡಿಲು ಬಳಸಿಕೊಂಡು ಮನೆಯಲ್ಲಿದ್ದ ಅಕ್ಕಿ ಹಾಗೂ ಆಹಾರ ಪದಾರ್ಥವನ್ನು ಹುಡುಕುತ್ತಿದೆ. ಕುಟುಂಬ ಸದಸ್ಯರು ಹಾಗೂ ಸ್ಥಳೀಯರ ಕೂಗಾಟ ಹಾಗೂ ಶಬ್ದದಿಂದ ಬೆದರಿದಂತೆ ಕಂಡ ಆನೆ ಕೆಲ ಸಮಯದ ಬಳಿಕ ಮನೆಯಿಂದ ತೆರಳಿದೆ.

ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡಿದೆ. ಆದರೆ ಕೊಯಂಬತ್ತೂರಿನಲ್ಲಿ ಆಹಾರ ಹುಡುಕಿಕೊಂಡು ಮನೆಗಳಿಗೆ ನುಗ್ಗಿರುವುದು ಇದೇ ಮೊದಲಲ್ಲ. ಅನೇಕ ಬಾರಿ ಈ ರೀತಿಯ ದಾಳಿಗಳು ನಡೆದಿವೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...