alex Certify
ಕನ್ನಡ ದುನಿಯಾ       Mobile App
       

Kannada Duniya

ಜಡ್ಜ್ ಮೇಲೆ ಶೂ ಎಸೆದ ಕೈದಿ

Court-Management

ಮುಂಬೈ: ನ್ಯಾಯಾಲಯಕ್ಕೆ ಕೈದಿಗಳನ್ನು ಕರೆದುಕೊಂಡು ಬರುವಾಗ ಮತ್ತು ವಿಚಾರಣೆ ಸಂದರ್ಭದಲ್ಲಿ ಪೊಲೀಸರು ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಇಲ್ಲದಿದ್ದರೆ ಪೇಚಾಟಕ್ಕೆ ಸಿಲುಕುವಂತೆ ಮಾಡುತ್ತಾರೆ ಕೈದಿಗಳು. ಅಷ್ಟಕ್ಕೂ ಏನಿದು ಘಟನೆ ಎಂಬುದನ್ನು ತಿಳಿಯಲು ಮುಂದೆ ಓದಿ.

ನ್ಯಾಯಾಲಯಗಳಲ್ಲಿ ತೀರ್ಮಾನ ಪ್ರಕಟವಾಗಲು ತೀರಾ ವಿಳಂಬವಾಗುತ್ತದೆ. ಹಾಗಾಗಿ, ಎಷ್ಟೋ ಪ್ರಕರಣಗಳು ಹಲವಾರು ವರ್ಷಗಳಿಂದ ವಿಚಾರಣೆ ಹಂತದಲ್ಲಿಯೇ ಇವೆ ಎಂದು ಹೇಳಲಾಗುತ್ತದೆ. ಹೀಗೆ ಪದೇ ಪದೇ ವಿಚಾರಣೆ ಮುಂದೂಡಿದ್ದರಿಂದ ಆಕ್ರೋಶಗೊಂಡ ವಿಚಾರಣಾಧೀನ ಕೈದಿಯೊಬ್ಬ, ನ್ಯಾಯಾಧೀಶರ ಮೇಲೆಯೇ ಶೂ ಎಸೆದ ಘಟನೆ ಮುಂಬೈನಲ್ಲಿ ನಡೆದಿದೆ. ಚವ್ಹಾಣ್ ಎಂಬ ವಿಚಾರಣಾಧೀನ ಕೈದಿಯನ್ನು ಪೊಲೀಸರು ಜೈಲಿನಿಂದ ನ್ಯಾಯಾಲಯಕ್ಕೆ ಕರೆತರಲಾಗಿತ್ತು.

ಆರೋಪಿ ಚವ್ಹಾಣ್ ಜಾಮೀನು ಅರ್ಜಿಯ ವಿಚಾರಣೆಯನ್ನು ನ್ಯಾಯಾಧೀಶರು ಮುಂದೂಡಿ, ನ್ಯಾಯಾಂಗ ಬಂಧನದ ಅವಧಿಯನ್ನು ವಿಸ್ತರಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಚವ್ಹಾಣ್, ಅವಾಚ್ಯ ಪದಗಳಿಂದ ನ್ಯಾಯಾಧೀಶರನ್ನು ನಿಂದಿಸಿ ಅವರ ಮೇಲೆ ಶೂ ಎಸೆದಿದ್ದಾನೆ. ಆದರೆ ಅದು ಅವರಿಗೆ ತಗುಲದೆ ಪಕ್ಕದಲ್ಲೇ ಬಿದ್ದಿದೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...