alex Certify
ಕನ್ನಡ ದುನಿಯಾ       Mobile App
       

Kannada Duniya

ಗ್ರಾಹಕರ ಜೇಬಿಗೆ ಕತ್ತರಿ ಹಾಕ್ತಿದ್ದ ಡೊಮಿನೊಸ್ ಬಣ್ಣ ಬಯಲು

ಪಿಜ್ಜಾ ತಯಾರಿಕಾ ಕಂಪನಿ ಡೊಮಿನೊಸ್ ಪಿಜ್ಜಾ ಮೇಲೆ ಗಂಭೀರ ಆರೋಪವೊಂದು ಕೇಳಿ ಬಂದಿದೆ. ಡೊಮಿನೊಸ್ ಪಿಜ್ಜಾ ಜಿಎಸ್ಟಿ ಕಡಿತದ ಲಾಭವನ್ನು ಗ್ರಾಹಕರಿಗೆ ನೀಡ್ತಿಲ್ಲ ಎಂಬ ಆರೋಪ ಹೇಳಿ ಬಂದಿದೆ. ಜಿಎಸ್ಟಿ ದರ ಶೇಕಡಾ 18ರಿಂದ ಶೇಕಡಾ 5ಕ್ಕೆ ಇಳಿಕೆಯಾಗಿದೆ. ಆದ್ರೂ ಡೊಮಿನೊಸ್ ಪಿಜ್ಜಾ ಮಾತ್ರ ಗ್ರಾಹಕರಿಂದ ಹೆಚ್ಚಿನ ಹಣವನ್ನು ವಸೂಲಿ ಮಾಡ್ತಿದೆ.

ಈ ಬಗ್ಗೆ ಗ್ರಾಹಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಜುಬಿಲೆಂಟ್ ಫುಡ್ ವರ್ಕ್ಸ್ ಸೇರಿದಂತೆ 15 ಕಂಪನಿಗಳಿಗೆ ನೋಟೀಸ್ ಜಾರಿ ಮಾಡಲಾಗಿದೆ. ನವೆಂಬರ್ ನಂತ್ರ ಜಿಎಸ್ಟಿ ದರದಲ್ಲಿ ಇಳಿಕೆಯಾದ ಲಾಭವನ್ನು ಗ್ರಾಹಕರಿಗೆ ತಲುಪಿಸಿದ್ದೀರಾ ಎಂದು ಪ್ರಶ್ನೆ ಕೇಳಲಾಗಿದೆ.

ಜಿಎಸ್ಟಿ ಇಳಿಕೆ ನಂತ್ರವೂ ಡೊಮಿನೊಸ್ ಹೆಚ್ಚಿನ ಹಣ ಪಡೆಯುತ್ತಿದೆ ಎಂದು ಇಬ್ಬರು ಗ್ರಾಹಕರು ಸ್ಥಾಯಿ ಸಮಿತಿಗೆ ದೂರು ನೀಡಿದ್ದರು. ಜುಬಿಲೆಂಟ್ ಫುಡ್ ವರ್ಕ್ಸ್ ಈ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದೆ. ಡಿಜಿಎಸ್ ಮೂರು ತಿಂಗಳಲ್ಲಿ ಈ ಬಗ್ಗೆ  ತನಿಖಾ ವರದಿ ಸಿದ್ಧಪಡಿಸಿ ಸ್ಥಾಯಿ ಸಮಿತಿಗೆ ನೀಡಬೇಕಿದೆ. ಇದಾದ ನಂತ್ರ ಸ್ಥಾಯಿ ಸಮಿತಿ ಕ್ರಮಕೈಗೊಳ್ಳಲಿದೆ. ತಪ್ಪು ಸಾಬೀತಾದಲ್ಲಿ ದಂಡ ಅಥವಾ ಪರವಾನಿಗೆ ಕುರಿತು ಶಿಕ್ಷೆ ವಿಧಿಸುವ ಸಾಧ್ಯತೆಯಿದೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...