alex Certify
ಕನ್ನಡ ದುನಿಯಾ       Mobile App
       

Kannada Duniya

ಅನುಮಾನ ಹುಟ್ಟುಹಾಕಿದ ಪತ್ರಕರ್ತನ ಸಾವು

ಬಿಹಾರದ ಆರಾದಲ್ಲಿ ಇಬ್ಬರು ಪತ್ರಕರ್ತರ ಹತ್ಯೆ ನಂತ್ರ ಮಧ್ಯಪ್ರದೇಶದಲ್ಲಿ ವರದಿಗಾರನೊಬ್ಬನ ಸಾವು ಅನುಮಾನ ಹುಟ್ಟಿಸಿದೆ. ಲಾರಿ ಡಿಕ್ಕಿ ಹೊಡೆದು ಪತ್ರಕರ್ತ ಸಾವನ್ನಪ್ಪಿದ್ದಾನೆ. ಆದ್ರೆ ಇದು ಕೊಲೆ ಎಂಬ ಶಂಕೆ ವ್ಯಕ್ತವಾಗಿದೆ.

35 ವರ್ಷದ ವರದಿಗಾರ ಸಂದೀಪ್ ಲಾರಿ ಹರಿದು ಸಾವನ್ನಪ್ಪಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಸಂದೀಪ್ ಸೋಮವಾರ ಬೆಳಿಗ್ಗೆ ಬೈಕ್ ನಲ್ಲಿ ಹೊರಟಿದ್ದ. ರಸ್ತೆ ಬದಿಯಲ್ಲಿ ಹೋಗ್ತಿದ್ದ ಸಂದೀಪ್ ಬೈಕ್ ಸಮೀಪ ಬಂದ ಲಾರಿ ನಂತ್ರ ವೇಗ ಹೆಚ್ಚಿಸಿಕೊಂಡು ಸಂದೀಪ್ ಮೇಲೆ ಹರಿದಿದೆ. ಘಟನೆ ಸಿಸಿ ಟಿವಿಯಲ್ಲಿ ದಾಖಲಾಗಿದೆ.

ಲಾರಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಲಾರಿ ಚಾಲಕ ಪರಾರಿಯಾಗಿದ್ದಾನೆಂದು ಪೊಲೀಸರು ಹೇಳಿದ್ದಾರೆ. ಸಂದೀಪ್ ಕೆಲ ದಿನಗಳ ಹಿಂದೆ ಮರಳು ಮಾಫಿಯಾ ಬಗ್ಗೆ ಸ್ಟಿಂಗ್ ವರದಿ ಸಿದ್ಧಪಡಿಸಿದ್ದ. ಪೊಲೀಸ್ ಹಾಗೂ ಮರಳು ಮಾಫಿಯಾ ಮಧ್ಯೆಯಿರುವ ಸಂಬಂಧವನ್ನು ಬಯಲಿಗೆಳೆದಿದ್ದ. ಪೊಲೀಸ್ ಅಧಿಕಾರಿ ಹಣ ಪಡೆಯುತ್ತಿದ್ದ ದೃಶ್ಯ ನೀಡಿದ್ದ. ಇದೇ ಕಾರಣಕ್ಕೆ ಕೊಲೆ ನಡೆದಿರಬಹುದೆಂದು ಅಂದಾಜಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...