alex Certify
ಕನ್ನಡ ದುನಿಯಾ       Mobile App
       

Kannada Duniya

ನಿತೀಶ್ ಸರ್ಕಾರ ರಚನೆ ಪ್ರಶ್ನಿಸಿದ್ದ PIL ವಜಾ

patn-hcc

ಬಿಹಾರ: ಮಹಾಘಟ್ ಬಂಧನ್ ಮೈತ್ರಿ ಕಡಿದುಕೊಂಡು, ರಾಜೀನಾಮೆ ನೀಡಿದ 24 ಗಂಟೆಯೊಳಗೆ ನಿತೀಶ್ ಕುಮಾರ್ ಮತ್ತೆ ಮುಖ್ಯಮಂತ್ರಿಯಾಗಿದ್ದಾರೆ.

ಬಿ.ಜೆ.ಪಿ. ನೇತೃತ್ವದ ಎನ್.ಡಿ.ಎ. ಮತ್ತು ಜೆ.ಡಿ.ಯು. ಸರ್ಕಾರ ರಚನೆಯಾಗಿದೆ. ಇದನ್ನು ಪ್ರಶ್ನಿಸಿ ಬಿಹಾರ ಪಾಟ್ನಾ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು.

ವಿಧಾನಸಭೆಯಲ್ಲಿ ಅತಿ ದೊಡ್ಡ ಪಕ್ಷವಾಗಿರುವ ಆರ್.ಜೆ.ಡಿ.ಗೆ ಸರ್ಕಾರ ರಚಿಸಲು ಆಹ್ವಾನ ನೀಡಿಲ್ಲ ಎಂದು ಆರ್.ಜೆ.ಡಿ. ಶಾಸಕರಾದ ಸರೋಜ್ ಯಾದವ್ ಮತ್ತು ಚಂದನ್ ವರ್ಮ ಅರ್ಜಿ ಸಲ್ಲಿಸಿದ್ದರು. ಸಮಾಜವಾದಿ ಪಕ್ಷದ ಸದಸ್ಯ ಜಿತೇಂದ್ರ ಕುಮಾರ್ ಅವರೂ 2 ನೇ ಪಿ.ಐ.ಎಲ್. ಸಲ್ಲಿಸಿದ್ದರು.

ಈ ಅರ್ಜಿಯನ್ನು ಹೈಕೋರ್ಟ್ ಸ್ವೀಕರಿಸಿದ್ದು, ಇಂದು ಮುಖ್ಯ ನ್ಯಾ. ರಾಜೇಂದ್ರ ಮೆನನ್, ನ್ಯಾ. ಎ.ಕೆ. ಉಪಾಧ್ಯಾಯ ಅವರನ್ನೊಳಗೊಂಡ ವಿಭಾಗೀಯ ಪೀಠದಲ್ಲಿ ವಿಚಾರಣೆ ನಡೆಸಲಾಗಿದೆ.

ವಿಧಾನಸಭೆಯಲ್ಲಿ ಸರ್ಕಾರ ಬಹುಮತ ಸಾಬೀತುಪಡಿಸಿದೆ. ಹೀಗಿರುವಾಗ ಮಧ್ಯಪ್ರವೇಶಿಸುವ ಅಗತ್ಯವಿಲ್ಲ ಎಂದು ಹೇಳಿ, ಅರ್ಜಿಗಳನ್ನು ವಜಾಗೊಳಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...