alex Certify
ಕನ್ನಡ ದುನಿಯಾ       Mobile App
       

Kannada Duniya

ಮದ್ಯದ ದೊರೆಗಾಗಿ ಲಂಡನ್ ತಲುಪಿದ ಸಿಬಿಐ ಟೀಂ

copy_of_vjm_4_400x400

ಸಾಲ ಮಾಡಿ ತಲೆಮರೆಸಿಕೊಂಡಿರುವ ಉದ್ಯಮಿ ವಿಜಯ್ ಮಲ್ಯರನ್ನು ಭಾರತಕ್ಕೆ ಕರೆತರುವ ಪ್ರಕ್ರಿಯೆ ಚುರುಕುಪಡೆದಿದೆ. ಸಿಬಿಐ ಹಾಗೂ ಐಡಿ ತಂಡವೊಂದು ಲಂಡನ್ ತಲುಪಿದೆ ಎಂದು ಮೂಲಗಳು ಹೇಳಿವೆ.

ಸಿಬಿಐ ಹಾಗೂ ಐಡಿಯ ನಾಲ್ವರು ಸದಸ್ಯರು ಲಂಡನ್ ಗೆ ತೆರಳಿದ್ದಾರೆ. ಲಂಡನ್ ಸರ್ಕಾರಕ್ಕೆ ಈ ಮೊದಲೇ ಕೆಲವೊಂದು ದಾಖಲೆಗಳನ್ನು ನೀಡಿದ್ದು, ಸರ್ಕಾರದ ಜೊತೆ ಅಧಿಕಾರಿಗಳು ಮಾತುಕತೆ ನಡೆಸಲಿದ್ದಾರೆ. 9 ಸಾವಿರ ಕೋಟಿ ಸಾಲ ಮಾಡಿ ವಿದೇಶಕ್ಕೆ ಹೋಗಿರುವ ಮಲ್ಯರನ್ನು ಭಾರತಕ್ಕೆ ಹಸ್ತಾಂತರ ಮಾಡುವಂತೆ ಅಲ್ಲಿನ ಸರ್ಕಾರಕ್ಕೆ ಭಾರತ ಸರ್ಕಾರ ಮನವಿ ಮಾಡಿತ್ತು.

ಕೆಲ ದಿನಗಳ ಹಿಂದಷ್ಟೆ ಮಲ್ಯರನ್ನು ಸ್ಕಾಟ್ಲ್ಯಾಂಡ್ ಯಾರ್ಡ್ ಪೊಲೀಸರು ಬಂಧಿಸಿ, ವೆಸ್ಟ್ ಮಿನ್ಸ್ಟರ್ ಕೋರ್ಟ್ಗೆ ಹಾಜರುಪಡಿಸಿದ್ದರು. ಬಂಧನವಾಗಿ ಕೆಲವೇ ಗಂಟೆಗಳಲ್ಲಿ ನ್ಯಾಯಾಲಯ ಮಲ್ಯಗೆ ಜಾಮೀನು ನೀಡಿತ್ತು. ಇದಾದ ನಂತ್ರ ಮಲ್ಯರನ್ನು ಭಾರತಕ್ಕೆ ಕರೆತರಲು ಸಿಬಿಐ ಹಾಗೂ ಇಡಿ ತಂಡ ಲಂಡನ್ ಗೆ ಹೋಗಲಿದೆ ಎನ್ನಲಾಗ್ತಾ ಇತ್ತು. ಈಗ ತಂಡ ಲಂಡನ್ ಗೆ ತೆರಳಿದ್ದು, ಮುಂದೇನು ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...