alex Certify
ಕನ್ನಡ ದುನಿಯಾ       Mobile App
       

Kannada Duniya

‘ಸೇನೆಗೆ ಸೇರಿ ಉತ್ತಮ ದರ್ಜೆಯ ಮದ್ಯ ಸೇವಿಸಿ’

ಪುಣೆ: ಭಾರತ ಕ್ರಿಕೆಟ್ ತಂಡದಲ್ಲಿ ದಲಿತರಿಗೆ ಮೀಸಲಾತಿ ನೀಡಬೇಕೆಂದು ಹೇಳಿದ್ದ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ಸಚಿವ, ಆರ್.ಪಿ.ಐ. ಮುಖಂಡ ರಾಮದಾಸ್ ಅಠಾವಳೆ ಮತ್ತೊಂದು ವಿವಾದಿತ ಹೇಳಿಕೆ ನೀಡಿದ್ದಾರೆ.

ನಿರುದ್ಯೋಗಿ ದಲಿತ ಯುವಕರು ದೇಶೀಯ ಮದ್ಯ ಸೇವಿಸುವ ಬದಲು, ಸೇನೆಯನ್ನು ಸೇರಿ ರಮ್ ಕುಡಿಯುವಂತೆ ಸಲಹೆ ನೀಡಿದ್ದಾರೆ.

ಪುಣೆಯಲ್ಲಿ ಮಾತನಾಡಿದ ಅವರು, ದಲಿತರು ದೇಶಕ್ಕಾಗಿ ಪ್ರಾಣ ಕೊಡಲು ಸಿದ್ಧವಿರುತ್ತಾರೆ. ಅವರಿಗೆ ಭೂ ಸೇನೆ, ವಾಯು ಸೇನೆ ಮತ್ತು ನೌಕಾದಳದಲ್ಲಿ ಮೀಸಲಾತಿ ನೀಡಬೇಕು. ಈ ಸಂಬಂಧ ನಾನು ಸಂಬಂಧಿಸಿದವರೊಂದಿಗೆ ಚರ್ಚಿಸುತ್ತೇನೆ ಎಂದು ಹೇಳಿದ್ದಾರೆ.

ಸೇನೆಗೆ ಸೇರಿದವರೆಲ್ಲಾ ಹುತಾತ್ಮರಾಗುವುದಿಲ್ಲ. ಹೆಚ್ಚಿನವರು ಅಪಘಾತದಲ್ಲಿ ಸಾಯುತ್ತಾರೆ. ದಲಿತ ನಿರುದ್ಯೋಗಿ ಯುವಕರು, ದೇಶಿ ಮದ್ಯ ಕುಡಿದು ಸಾಯುವುದಕ್ಕಿಂತ ಸೇನೆ ಸೇರಿ ಉಚಿತವಾಗಿ ಸಿಗುವ ರಮ್ ಕುಡಿಯಿರಿ ಎಂದು ಸಲಹೆ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...