alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್….ಹಂತಕ ಶಂಭುಲಾಲ್ ಟ್ಯಾಬ್ಲೋಗೆ ಜೋಧ್ಪುರದಲ್ಲಿ ಸನ್ಮಾನ

ಪಶ್ಚಿಮ ಬಂಗಾಳ ಮೂಲದ ಕಾರ್ಮಿಕನನ್ನು ಕೊಂದು ಆತನಿಗೆ ಬೆಂಕಿ ಹಚ್ಚಿದ್ದ ಹಂತಕ ಶಂಭುಲಾಲ್ ರೇಗರ್ ಎಂಬಾತನ ಟ್ಯಾಬ್ಲೋ ನಿರ್ಮಿಸಿ, ಅದಕ್ಕೆ ಸನ್ಮಾನ ಮಾಡಲಾಗಿದೆ.  ರಾಮ ನವಮಿ ದಿನ ಜೋಧ್ಪುರದಲ್ಲಿ ಶಂಭು ಟ್ಯಾಬ್ಲೋಗೆ ಸನ್ಮಾನಿಸಿರುವ ಫೋಟೋಗಳು  ಇಂಟರ್ನೆಟ್ ನಲ್ಲಿ ಹರಿದಾಡುತ್ತಿವೆ.

ಕಳೆದ ಡಿಸೆಂಬರ್ 6ರಂದು ಶಂಭು, ಲವ್ ಜಿಹಾದ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಫ್ರಾಜುಲ್ ಎಂಬಾತನನ್ನು ಬರ್ಬರವಾಗಿ ಕೊಂದಿದ್ದ. ತನ್ನ ಕೃತ್ಯವನ್ನು ಮೊಬೈಲ್ ನಲ್ಲೂ ರೆಕಾರ್ಡ್ ಮಾಡಿಕೊಂಡಿದ್ದ. ಹಿಂದು ಮಹಿಳೆಯನ್ನು ಪ್ರೀತಿಸಿದ ತಪ್ಪಿಗೆ ಆತನಿಗೆ ಈ ಶಿಕ್ಷೆ ಕೊಟ್ಟಿದ್ದೇನೆಂದು ಹೆಮ್ಮೆಯಿಂದ ಹೇಳಿಕೊಂಡಿದ್ದ.

ತನ್ನ ಅಕ್ರಮ ಸಂಬಂಧವನ್ನು ಮುಚ್ಚಿಡಲು ಶಂಭು ಈ ಕೃತ್ಯ ಎಸಗಿದ್ದ. ಯಾಕಂದ್ರೆ ಆ ಮಹಿಳೆ ಬಂಗಾಳ ಮೂಲದ ಮುಸ್ಲಿಂ ವ್ಯಕ್ತಿಯನ್ನು ಇಷ್ಟಪಟ್ಟಿದ್ದಳು. ತಾನು ಮಾಡಿದ ಕೃತ್ಯವನ್ನು ಸಮರ್ಥಿಸಿಕೊಂಡು ಹಂತಕ ವಿಡಿಯೋ ಸಹ ಅಪ್ಲೋಡ್ ಮಾಡಿದ್ದ.ಈಗ ಆತನ ಪ್ರತಿಕೃತಿಗೆ ಸನ್ಮಾನಿಸಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...